ಪ್ರಿಯಕರನಿಗೆ ಕರೆ ಮಾಡಿ ಆತ್ಮಹತ್ಯೆಗೆ ಹತ್ನಿಸಿದ ಯುವತಿ; ಸಮಯಪ್ರಜ್ಞೆ ಮೆರೆದ ಯುವಕ–ಖಾಕಿ ರಕ್ಷಣೆ

Share with

ಬೆಂಗಳೂರು: ಆತ್ಮಹತ್ಯೆಗೆ ಯತ್ನಿಸಲು ಮುಂದಾಗಿದ್ದ ಯುವತಿಯನ್ನು ವೈಟ್‌ಫೀಲ್ಡ್ ಠಾಣೆ ಪೊಲೀಸರು ರಕ್ಷಿಸಿದ್ದಾರೆ.

ಇಮ್ಮಡಿಹಳ್ಳಿ, ಟೆಕ್ಕೋ ಸ್ಕೂಲ್ ರಸ್ತೆಯ ಬಳಿ ವಾಸವಾಗಿದ್ದ ಯುವತಿ ಆಕೆಯ ಪ್ರಿಯಕರನಿಗೆ ಕರೆ ಮಾಡಿ, ನೀನು ನನ್ನನ್ನು ವಿವಾಹವಾಗದ ಹಿನ್ನೆಲೆಯಲ್ಲಿ ನಾನು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬೆದರಿಕೆ ಹಾಕಿದ್ದಾಳೆ.

ಆತಂಕಗೊಂಡ ಪ್ರಿಯಕರ ಕೂಡಲೇ 112ಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ.

ಕಾರ್ಯಪ್ರವೃತ್ತರಾದ ನಮ್ಮ-112 ಸಿಬ್ಬಂದಿ, ವೈಟ್‌ಫೀಲ್ಡ್ ಠಾಣೆಯ ಚೀತಾ ಸಿಬ್ಬಂದಿ ಹೆಡ್‌ಕಾನ್‌ಸ್ಟೇಬಲ್ ಬಂಗಾರಪ್ಪ ಎಂಬುವರಿಗೆ ಮಾಹಿತಿ ನೀಡಿದ್ದಾರೆ.

13 ನಿಮಿಷಕ್ಕೆ ಇಮ್ಮಡಿಹಳ್ಳಿಯಲ್ಲಿರುವ ಯುವತಿ ಮನೆಗೆ ಭೇಟಿ ನೀಡಿದ ಅವರು, ಮನೆ ಕಿಟಕಿ ತೆರೆದು ನೋಡಿದಾಗಿ ಯುವತಿ ಆತ್ಮಹತ್ಯೆಗೆ ಯತ್ನಿಸುತ್ತಿರುವುದು ಕಂಡು ಬಂದಿದೆ. ಕೂಡಲೇ ಆಕೆಯನ್ನು ಮನವೊಲಿಸಿ, ಸಮಸ್ಯೆ, ಸಂಕಷ್ಟಗಳಿಗೆ ಆತ್ಮಹತ್ಯೆ ಒಂದೆ ಪರಿಹಾರವಲ್ಲ ಎಂದು ಧೈರ್ಯ ತುಂಬಿ ಆಕೆಯನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.


Share with

Leave a Reply

Your email address will not be published. Required fields are marked *