ಮಂಗಳೂರು: ಇನ್‌ಸ್ಟಾಗ್ರಾಂನಲ್ಲಿ ಬಂದ ಜಾಹೀರಾತನ್ನು ನಂಬಿ ಟ್ರೇಡಿಂಗ್ ಇನ್‌ವೆಸ್ಟ್‌ಮೆಂಟ್ ಮಾಡಿ ಬನ್ನೂರಿನ ಯುವತಿ 4.09 ಲಕ್ಷ ರೂ. ಕಳೆದುಕೊಂಡಿರುವ ಘಟನೆ ನಡೆದಿದೆ.
ಬೆಂಗಳೂರಿನ ಕಂಪನಿಯೊಂದರಲ್ಲಿ ಯುವತಿ ಕೆಲಸ ಮಾಡುತ್ತಿದ್ದು, ಮಾ.1 ರಂದು ಇನ್‌ಸ್ಟಾಗ್ರಾಂ ಖಾತೆಯಿಂದ ಟಾಸ್ಕ್ ಮಾಡಲು ಯುಪಿಐಐಡಿಗೆ 10 ಸಾವಿರ ರೂ. ಕಳುಹಿಸುವಂತೆ ತಿಳಿಸಿದ್ದು, ಇದನ್ನು ಆಕೆ ಫೋನ್ ಪೇ ಮೂಲಕ ಮಾಡಿದ್ದಾರೆ. ನಂತರ ಇದೇ ರೀತಿ ಯುವತಿಗೆ ಮತ್ತೆ 10 ಸಾವಿರ ಹಾಕಿದರೆ 2 ಲಕ್ಷ ರೂ. ಗಳಿಸಬಹುದು ಎಂದು ಸಂದೇಶ ಬಂದಿತ್ತು. ಅನಂತರ ಯುವತಿ ಹಂತ ಹಂತವಾಗಿ ಹಣ ವರ್ಗಾವಣೆ ಮಾಡಿದ್ದು, ಬರೋಬ್ಬರಿ 4,90,997 ಪಾವತಿ ಮಾಡಿದ್ದರು.
ಆದರೆ ಯುವತಿಯ ಖಾತೆಗೆ ಹಣ ಬಾರದೆ ವಂಚನೆ ಮಾಡಿರುವುದು ಅರಿವಿಗೆ ಬಂದ ನಂತರ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
.





