ಕಾಸರಗೋಡು : ರಾಜಸ್ಥಾನಕ್ಕೆ ಶಿಕ್ಷಣಕ್ಕೆಂದು ತೆರಳಿದ್ದ ವಿದ್ಯಾರ್ಥಿನಿ ಹಾಸ್ಟೆಲ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕಣ್ಣೂರು ಸಮೀಪದ ಚಕ್ಕರಕ್ಕಲ್‌ನ ವಿದ್ಯಾರ್ಥಿನಿಯಾದ ಪಯ್ಯ೦ಬಲಂನ ಪಾರ್ವತಿ ನಿವಾಸ್‌ನ ಪೂಜಾ (23) ಮೃತ ವಿದ್ಯಾರ್ಥಿನಿ.

ಈಕೆ ರಾಜಸ್ಥಾನದ ಶ್ರೀ ಗಂಗಾನಗರ ಸರ್ಕಾರಿ ಪಶುವೈದ್ಯಕೀಯ ಕಾಲೇಜಿನ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಮೃತರು ತಂದೆ ವಸಂತನ್, ತಾಯಿ ಸಿಂಧು ಅವರನ್ನು ಅಗಲಿದ್ದಾರೆ.




