ನವದೆಹಲಿ: ಬಿಹಾರದಲ್ಲಿ ನಡೆಯುತ್ತಿರುವ ವಿಶೇಷ ಮತಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಹೆಸರನ್ನು ಸೇರ್ಪಡೆ ಮಾಡಲು ಅಥ ವಾ ಹೆಸರನ್ನು ಕೈಬಿಡಲು ಆಧಾರ್ ಕಾರ್ಡ್ ಅನ್ನು 12 ದಾಖಲೆಗಳ ಲ್ಲಿ ಒಂದನ್ನಾಗಿ ಪರಿಗಣಿಸಬೇಕು ಎಂದು ಸುಪ್ರೀಂಕೋರ್ಟ್ ಸೋಮವಾರ (ಸೆ.08) ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಿದೆ.

“ಮತ ಪಟ್ಟಿಗೆ ಹೆಸರು ಸೇರಿಸಲು ಗುರುತಿನ ಪುರಾವೆ ಪಟ್ಟಿಯಲ್ಲಿ 1 2ನೇ ದಾಖಲೆಯಾಗಿ ಆಧಾರ ಅನ್ನು ಪರಿಗಣಿಸಬಹುದು ಎಂದು ಸುಪ್ರೀಂಕೋರ್ಟ್ ಅದೇಶ ನೀಡಿದೆ. ಮತದಾರರನ್ನು ಗುರುತಿಸಲು ವಿವಿಧ ದಾಖಲೆಗಳನ್ನು ಪರಿಗಣಿಸಲಾಗುತ್ತದೆ.
ಆದಾಗ್ಯೂ ಗುರುತು ಮತ್ತು ಪೌರತ್ವಕ್ಕೆ ಸಂಬಂಧಿಸಿದ ಕಾನೂನು ವ್ಯ ತ್ಯಾಸವನ್ನು ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಒಬ್ಬ ವ್ಯಕ್ತಿಯ ಗುರುತಿನ ಪ್ರಕ್ರಿಯೆಗಾಗಿ ಆಧಾರ್ ಮಾನ್ಯವಾಗಲಿದೆ, ಆದರೆ ಭಾರ ತೀಯ ಪೌರತ್ವಕ್ಕೆ ಆಧಾರ್ ಅನ್ನು ಪುರಾವೆಯಾಗಿ ಬಳಸುವಂತಿಲ್ಲ ಎಂದು ಹೇಳಿದೆ.
ಆಧಾರ್ ಕಾಯ್ದೆ ಮತ್ತು ಸಂಬಂಧಿತ ಶಾಸನಬದ್ಧ ನಿಬಂಧನೆಗಳನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, “ಆಧಾರ್ ಕಾರ್ಡ್ ಪೌರತ್ವದ ಪುರಾವೆಯಲ್ಲ ಮತ್ತು ಅದನ್ನು ಪೌರತ್ವದ ಪುರಾವೆಯಾಗಿ ಸ್ವೀಕರಿಸ ಲಾಗುವುದಿಲ್ಲ ಎಂದು ನಾವು ಸ್ಪಷ್ಟಪಡಿಸುತ್ತೇವೆ” ಎಂದು ಪುನ ರುಚ್ಚರಿಸಿದೆ.




