ಹೊಸ ಆಧಾರ್ ಆ್ಯಪ್ ನ್ನು ಕೇಂದ್ರ ಐಟಿ ಸಚಿವ ಅಶ್ವಿನಿ ವೈಷ್ಣವ್ ಅನಾವರಣಗೊಳಿಸಿದ್ದಾರೆ. ಆ್ಯಪ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ತೋರಿಸುವ ವಿಡಿಯೋವನ್ನು ಸಚಿವರು ಹಂಚಿಕೊಂಡಿದ್ದಾರೆ.

ಇದು QR ಕೋಡ್ ಪರಿಶೀಲನೆ ಮತ್ತು ನೈಜ-ಸಮಯದ ಮುಖ ಗುರುತಿಸುವಿಕೆಯಂತಹ ಫೀಚರ್ಗಳನ್ನು ಒಳಗೊಂಡಿದೆ. ಈ ಆ್ಯಪ್ನಿಂದಾಗಿ ಭೌತಿಕ ಕಾರ್ಡ್ಗಳು ಮತ್ತು ಜೆರಾಕ್ಸ್ ಕಾಪಿಗಳ ಅಗತ್ಯ ಇರುವುದಿಲ್ಲ.
ಕೇಂದ್ರ ಸರ್ಕಾರ ಜೀವನ ಸುಲಭತೆಯನ್ನು ಮತ್ತಷ್ಟು ಸುಧಾರಿಸುವತ್ತ ಪ್ರಾಥಮಿಕ ಗಮನವನ್ನು ಹರಿಸಿದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.
https://x.com/AshwiniVaishnaw/status/1909598876128231497




