ದೆಹಲಿ ಲೋಕಸಭಾ ಚುನಾವಣೆಯಲ್ಲಿ ಆಪ್ ಮತ್ತೊಮ್ಮೆ ಹೀನಾಯ ಸೋಲಿನತ್ತ ಮುಖ ಮಾಡಿದೆ. 7 ಸ್ಥಾನಗಳಲ್ಲಿ ಒಂದೂ ಕ್ಷೇತ್ರದಲ್ಲೂ ಮುನ್ನಡೆ ಹೊಂದಿಲ್ಲ. ಎಎಪಿ ಸಿಎಂ ಕೇಜಿವಾಲ್ ಜೊತೆಗೆ ಮನೀಶ್ ಸಿಸೋಡಿಯಾ ಮತ್ತು ಸತ್ಯೇಂದರ್ ಜೈನ್ ಜೈಲಿಗೆ ಹೋಗಿರುವುದು ಆ ಪಕ್ಷಕ್ಕೆ ನಕಾರಾತ್ಮಕವಾಗಿ ಪರಿಣಮಿಸಿದೆ. ಚುನಾವಣೆಗೂ ಮುನ್ನ ಕೇಜಿವಾಲ್ ಜಾಮೀನಿನ ಮೇಲೆ ಬಂದು ಪ್ರಚಾರ ಮಾಡಿದರೂ ಪ್ರಯೋಜನವಾಗಿಲ್ಲ ಎಂಬುದು ಮತ ಎಣಿಕೆಯಿಂದ ಸ್ಪಷ್ಟವಾಗಿದೆ. 2019ರ ಚುನಾವಣೆಯಲ್ಲೂ ಈ ಪಕ್ಷ ಹೀನಾಯ ಸೋಲು ಕಂಡಿತ್ತು.