ಕೊನೆಗೂ ಐಶ್ವರ್ಯಾ ರೈಗೆ ಓಪನ್ ಆಗಿ ಧನ್ಯವಾದ ಹೇಳಿದ ಅಭಿಷೇಕ್; ಕಾರಣವೇನು?

Share with

ಅಭಿಷೇಕ್ ಬಚ್ಚನ್ ಹಾಗೂ ಐಶ್ವರ್ಯಾ ರೈ ಮಧ್ಯೆ ಸಾಕಷ್ಟು ವಿಚಾರಗಳು ಚರ್ಚೆ ಆಗುತ್ತಿವೆ. ಅವರು ಬೇರೆ ಆಗಿದ್ದಾರೆ ಎಂದು ಕೆಲವರು ಹೇಳಿದ್ದಾರೆ. ಆದರೆ, ಅಭಿಷೇಕ್ ಬಚ್ಚನ್ ಹಾಗೂ ಅಮಿತಾಭ್ ಬಚ್ಚನ್ ಇದನ್ನು ಅಲ್ಲಗಳೆಯುತ್ತಾ ಬರುತ್ತಿದ್ದಾರೆ. ಆದರೆ, ಐಶ್ವರ್ಯಾ ಹಾಗೂ ಅಭಿಷೇಕ್ ಒಟ್ಟಾಗಿ ಮಾತ್ರ ಕಾಣಿಸಿಕೊಳ್ಳುತ್ತಿಲ್ಲ. ಹೀಗಾಗಿ, ಆ ಅನುಮಾನ ಹಾಗೆಯೇ ಇರುವಂತೆ ಮಾಡಿದ್ದಾರೆ. ಈಗ ಅಭಿಷೇಕ್ ಅವರು ತಾಯಿ ಆಗಿ ಐಶ್ವರ್ಯಾ ಹಾಗೂ ಜಯಾ ಬಚ್ಚನ್ ನಿರ್ವಹಿಸುತ್ತಿರುವ ಜವಾಬ್ದಾರಿ ಬಗ್ಗೆ ಮಾತನಾಡಿದ್ದಾರೆ.
ನನ್ನ ತಾಯಿ ನಾನು ಜನಿಸಿದ ಬಳಿಕ ನಟನೆ ತೊರೆದರು. ಮಕ್ಕಳ ಜೊತೆ ಸಮಯ ಕಳೆಯುವ ಉದ್ದೇಶ ಅವರದ್ದಾಗಿತ್ತು. ನನ್ನ ತಂದೆ ಹತ್ತಿರ ಇಲ್ಲ ಎಂದು ಅನುಭವಿಸೋಕೆ ತಾಯಿ ಬಿಡಲಿಲ್ಲ. ರಾತ್ರಿ ತಂದೆ ಬರುತ್ತಿದ್ದರು’ ಎಂದಿದ್ದಾರೆ ಅಭಿಷೇಕ್.

‘ನನ್ನ ಮನೆಯಲ್ಲಿ ನಾನು ಹೊರಗೆ  ಹೋಗಿ ಸಿನಿಮಾ ಮಾಡಲು ಲಕ್ಕಿ ನಾನು. ಐಶ್ವರ್ಯಾ ಅವರು ಯಾವಾಗಲೂ ಆರಾಧ್ಯಳೊಂದಿಗೆ ಮನೆಯಲ್ಲಿದ್ದಾರೆ. ಅದಕ್ಕಾಗಿ ನಾನು ಅವರಿಗೆ ಅಪಾರ ಧನ್ಯವಾದ ಹೇಳುತ್ತೇನೆ. ನಾನು ಮಕ್ಕಳ ಜೊತೆ ಇಲ್ಲ ಎಂಬ ಕಾರಣಕ್ಕೆ ಅವರು ನನ್ನನ್ನು ಮೂರನೇ ವ್ಯಕ್ತಿ ಆಗಿ ನೋಡಲ್ಲ. ಅವರಲ್ಲಿ ಒಬ್ಬರು ಎಂದು ನನ್ನ ನೋಡುತ್ತಾರೆ’ ಎಂದಿದ್ದಾರೆ ಅಭಿಷೇಕ್.

ಅಭಿಷೇಕ್ ಬಚ್ಚನ್ ಅವರು ‘ಐ ವಾಂಟ್ ಟು ಟಾಕ್’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಚಿತ್ರದಲ್ಲಿ ಅವರು ಎಲ್ಲರ ಗಮನ ಸೆಳೆದಿದ್ದಾರೆ. ಅವರ ನಟನೆಯ ಬಗ್ಗೆ ಎಲ್ಲರಿಂದ ಮೆಚ್ಚುಗೆ ಸಿಗುತ್ತಿದೆ. ಅಭಿಷೇಕ್ ಬಚ್ಚನ್ ಅವರು ಭೇಷ್ ಎನಿಸಿಕೊಳ್ಳುತ್ತಿದ್ದಾರೆ. ಅವರು ಸಿಂಗಲ್ ಪೇರೆಂಟ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣಕ್ಕೆ ಕುಟುಂಬದ ಬಗ್ಗೆ, ಕುಟುಂಬದ ವಿಚಾರದ ಬಗ್ಗೆ ಅವರು ಚರ್ಚೆ ಮಾಡುತ್ತಿದ್ದಾರೆ.
ಇತ್ತೀಚೆಗೆ ‘ಕೋಟ್ಯಾಧಿಪತಿ’ ಕಾರ್ಯಕ್ರಮಕ್ಕೆ ಅಭಿಷೇಕ್ ಬಚ್ಚನ್ ಅತಿಥಿಯಾಗಿ ತೆರಳಿದ್ದರು. ಈ ವೇಳೆ ಅವರು ಮಗಳ ಬಗ್ಗೆ ಮಾತನಾಡಿದ್ದಾರೆ. ‘ಆರಾಧ್ಯಾ ಯಾವಾಗಲೂ ನನ್ನ ಮಗಳು’ ಎಂದಿದ್ದಾರೆ.


Share with

Leave a Reply

Your email address will not be published. Required fields are marked *