ಗಂಭೀರ ಕಾಯಿಲೆಗಳ 36 ಔಷಧಿಗಳ ಸುಂಕ ತೆರಿಗೆ ರದ್ದು

Share with

36 ಜೀವರಕ್ಷಕ ಔಷಧಿಗಳ ಮೇಲಿನ ಸುಂಕ ತೆರಿಗೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.

ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಕ್ಯಾನ್ಸ‌ರ್ ಡೇ ಕೇರ್ ಸೆಂಟರ್ ನಿರ್ಮಿಸಲಾಗುವುದು. ಕ್ಯಾನ್ಸರ್ ಚಿಕಿತ್ಸೆಗೆ ಔಷಧಗಳು ಅಗ್ಗವಾಗಲಿದ್ದು, 6 ಜೀವ ರಕ್ಷಕ ಔಷಧಿಗಳ ಮೇಲಿನ ಕಸ್ಟಮ್ ಸುಂಕವನ್ನು ಶೇಕಡಾ 5ಕ್ಕೆ ಇಳಿಸಲಾಗುವುದು ಎಂದು ಪ್ರಕಟಿಸಿದ್ದಾರೆ. ಕೇಂದ್ರದ ಈ ಕ್ರಮದಿಂದಾಗಿ ಔಷಧಿಗಳ ಬೆಲೆ ಕಡಿಮೆಯಾಗಲಿದೆ.


Share with