ಪೈವಳಿಕೆ: ಭಾರೀ ಗಾಳಿ ಮಳೆಗೆ ಪೈವಳಿಕೆ ವಿದ್ಯುತ್ ಕಚೇರಿ ವ್ಯಾಪ್ತಿಯ ವಿವಿಧ ಕಡೆಗಳಲ್ಲಿ ಮರಗಳು ಮರಗಳು ಬಿದ್ದು ಸುಮಾರು ೨೦ರಷ್ಟು ವಿದ್ಯುತ್ ಕಂಬಗಳು ಹಾನಿಯಾಗಿದ್ದು, ಸಿಬ್ಬಂದಿಗಳ ಕಾರ್ಯಚರಣೆಯಿಂದ ಸಂಭವಿಸಬಹುದಾದ ಅಪಾಯ ತಪ್ಪಿದೆ. ಜುಲೈ 19ರಂದು ಸಂಜೆ ಸುರಿದ ಭಾರೀ ಮಳೆ ಗಾಳಿಗೆ ಈ ಘಟನೆ ನಡೆದಿದೆ. ಮಂಡೆಕಾಪು ಬಳಿಯ ಪರಪ್ಪು ಎಂಬಲ್ಲಿ ೧೦ರಷ್ಟು ಕಂಬಗಳು ಮುರಿದು ಬಿದ್ದಿದೆ. ಮತ್ತು ಲಾಲ್ಭಾಗ್ ಸಮೀಪದ ಕುಂಡೇರಿ, ಕನಿಯಾಲ ಸಹಿತ ವಿವಿಧ ಕಡೆಗಳಲ್ಲಿ ಸುಮಾರು ೨೦ರಷ್ಟು ಕಂಬಗಳು ಮುರಿದು ಬಿದ್ದಿದೆ. ಮಾಹಿತಿ ತಿಳಿದು ಸಿಬ್ಬಂದಿ ವರ್ಗದವರು ಕೂಡಲೇ ಸ್ಥಳಗಳಿಗೆ ತಲುಪಿ ವಿದ್ಯುತ್ ವಿಚ್ಚೇದಿಸಿ ಸಂಭವಿಸಬಹುದಾದ ದುರಂತವನ್ನು ತಪ್ಪಿಸಿದ್ದಾರೆ. ಬಳಿಕ ಮರಗಳನ್ನು ಕಡಿದು ತೆರವುಗೊಳಿಸಲಾಗಿದೆ. ಮಳೆಯನ್ನು ಲೆಕ್ಕಿಸದೆ ಸಿಬ್ಬಂದಿಗಳು ಕೆಲವು ಪ್ರದೇಶದಲ್ಲಿ ದುರಸ್ಥಿಕಾರ್ಯ ನಡೆಸಿದ್ದಾರೆ.