ಕಾಸರಗೋಡು: ಬೈಕ್ ಟಿಪ್ಪರ್ ಲಾರಿ ಮಧ್ಯೆ ಅಪಘಾತ; ಬೈಕ್ ಸವಾರ ಮೃತ್ಯು

Share with

ಕಾಸರಗೋಡು: ಬೈಕ್ ಹಾಗೂ ಟಿಪ್ಪರ್ ಲಾರಿ ಮಧ್ಯೆ ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟು ಇನ್ನೋರ್ವ ಗಂಭೀರ ಗಾಯಗೊಂಡಿದ್ದಾನೆ.

ಉಪ್ಪಳ ಬಳಿಯ ಸೋಂಕಲ್ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಕಾಲೇಜು ವಿದ್ಯಾರ್ಥಿ ಮೊಹಮ್ಮದ್ ಮುರ್ಸಾಬು

ಉಪ್ಪಳ ಬಳಿಯ ಸೋಂಕಲ್ ನಿವಾಸಿ ಅಬ್ದುಲ್ ಖಾದರ್ ಎಂಬವರ ಪುತ್ರ ಕಾಲೇಜು ವಿದ್ಯಾರ್ಥಿ ಮೊಹಮ್ಮದ್ ಮುರ್ಸಾಬು (21)ಮೃತಪಟ್ಟ ವಿದ್ಯಾರ್ಥಿ. ಮಾ.8ರಂದು ಬೆಳಿಗ್ಗೆ ಮುಟ್ಟ ಹೆದ್ದಾರಿ ಬಳಿ ಅಪಘಾತ ಸಂಭವಿಸಿದೆ ಕಾಸರಗೋಡು ಭಾಗದಿಂದ ಇಬ್ಬರು ಬೈಕಿನಲ್ಲಿ ಉಪ್ಪಳ ಭಾಗಕ್ಕೆ ಸಂಚರಿಸುತ್ತಿದ್ದಾಗ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿರುವುದಾಗಿ ತಿಳಿದು ಬಂದಿದೆ.

ಕೂಡಲೇ ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ಸಾಗಿಸುವ ಮಧ್ಯೆ ಮುಸ್ಸಾಬು ಮೃತಪಟ್ಟಿದ್ದಾನೆ. ಮಂಗಲ್ ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಶವಹಾಜರು ನಡೆಸಿ ಮೃತ ದೇಹವನ್ನು ಮನೆಯವರಿಗೆ ಹಸ್ತಾಂತರಿಸಿದ್ದಾರೆ.


Share with

Leave a Reply

Your email address will not be published. Required fields are marked *