ಮಂಜೇಶ್ವರ: ಕಳವುಗೈದ ಸ್ಕೂಟರ್ ಸಹಿತ ಆರೋಪಿಯನ್ನು ಮಂಜೇಶ್ವರ ಪೊಲೀಸರು ಸೆರೆ ಹಿಡಿದಿದ್ದಾರೆ. ದೇರಳಕಟ್ಟೆ ನಿವಾಸಿ ಹುಸೇನ್ ಸೈದು (25) ಸೆರೆ ಸಿಕ್ಕ ವ್ಯಕ್ತಿ.
ಮೂರು ದಿನಗಳ ಹಿಂದೆ ಮೇಲಿನ ತಲಪಾಡಿಯಲ್ಲಿ ಸ್ಕೂಟರ್ ಸಹಿತ ಆರೋಪಿಯನ್ನು ಎಸ್ಸೆ ಪ್ರಶಾಂತ್ ಸೆರೆ ಹಿಡಿದಿದ್ದಾರೆ. ನ.15ರಂದು ರಾತ್ರಿ ಹೊಸಬೆಟ್ಟು ಪೊಕ್ಕಿ ನಿವಾಸಿ ಅಬ್ದುಲ್ ಬಶೀರ್ ಎಂಬವರ ಮನೆಯಿಂದ ಇವರ ಸಂಬಂಧಿಕರ ಸ್ಕೂಟರ್ ಕಳವು ಹೋಗಿತ್ತು. ಈ ಸಂಬಂಧ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿರುವ ಮಧ್ಯೆ ಸ್ಕೂಟರ್ ಸಹಿತ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.