ಸಂಗ್ರಹಿಸಿದ ಹಳೆ ಬಟ್ಟೆಗಳಲ್ಲಿ ಸಿಕ್ಕ ಹಣ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಕಾರ್ಯಕರ್ತೆಯರು

Share with

ಮುಳ್ಳೇರಿಯ: ಹಳೆಯ ಸಾಮಗ್ರಿಗಳನ್ನು ಸಂಗ್ರಹಿಸಿದ್ದ ವೇಳೆ ಲಭಿಸಿದ ಹಣವನ್ನು ಮಾಲಕನಿಗೆ ಹಿಂತಿರುಗಿಸಿ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರು ಮಾದರಿಯಾಗಿದ್ದಾರೆ.

ಕಾರಡ್ಕ ಪಂಚಾಯತ್‌ನ 6ನೇ ವಾರ್ಡ್‌ ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯ ರಾದ ತಾರಾ, ಮೀನಾಕ್ಷಿ ಕಡೆಂಗೋಡು ಪ್ರಾಮಾಣಿಕತೆ ಮೆರೆದು ಮಾದರಿಯಾದವರು. ಇವರು ಮಲ್ಲಾವರ ನಿವಾಸಿ ಆನಂದ ಭಟ್‌ ಮನೆಯಿಂದ ಹಳೆಯ ಬಟ್ಟೆಗಳನ್ನು ಸಂಗ್ರಹಿಸಿದ್ದರು. ಇದನ್ನು ತೆಗೆದುಕೊಂಡು ಹೋಗಿ ಸಂಗ್ರಹಣಾ ಕೇಂದ್ರದಲ್ಲಿ ಹಾಕುವ ವೇಳೆ ಬಟ್ಟೆಗಳ ಮಧ್ಯೆ 5೦೦೦ ರೂ. ಪತ್ತೆಯಾಗಿದೆ. ಕೂಡಲೇ ಇದನ್ನು ಮಲ್ಲಾ ವರದ ಆನಂದ ಭಟ್‌ರ ಮನೆಗೆ ತೆರಳಿ ಹಿಂತಿರುಗಿಸಿ ದ್ದಾರೆ. ಹಸಿರು ಕ್ರಿಯಾ ಸೇನೆಯ ಕಾರ್ಯಕರ್ತೆಯರ ಈ ಮಾದರಿ ಕೆಲಸಕ್ಕೆ ಇವರನ್ನು ಪಂಚಾಯತ್ ಅಧ್ಯಕ್ಷ ಕೆ. ಗೋಪಾಲಕೃಷ್ಣ ಅಭಿನಂದಿಸಿದ್ದಾರೆ.


Share with

Leave a Reply

Your email address will not be published. Required fields are marked *