ಕುಟುಂಬದೊಂದಿಗೆ ಕೇರಳದ ಕಾರಣಿಕ ದೇವಸ್ಥಾನಕ್ಕೆ ಭೇಟಿ ನೀಡಿದ ನಟ “ದರ್ಶನ್”..!

Share with

ಕಣ್ಣೂರು: ಸ್ಯಾಂಡಲ್​ವುಡ್ ನಟ ದರ್ಶನ್ ಅವರು ಕೇರಳದ ಪ್ರಸಿದ್ಧ ದೇವಸ್ಥಾನ ಮಡಾಯಿಕಾವಿಗೆ ಭೇಟಿ ಕೊಟ್ಟಿದ್ದಾರೆ.
ರೇಣುಕಾಸ್ವಾಮಿ ಪ್ರಕರಣದಿಂದ ಸದ್ಯಕ್ಕೆ ರಿಲೀಫ್ ಪಡೆದಿರುವ ಚಾಲೆಂಜಿಂಗ್ ಸ್ಟಾರ್ ಪತ್ನಿ ವಿಜಯಲಕ್ಷ್ಮಿ ,ಪುತ್ರ ವಿನೀಶ್ ಹಾಗೂ ನಟ ಧನ್ವೀರ್ ಜೊತೆ ಮಾ.22ರಂದು ಕಣ್ಣೂರಿನ ಮಾಡಾಯಿಕಾವು ದೇವಸ್ಥಾನಕ್ಕೆ ಭೇಟಿ ನೀಡಿ ತಾಯಿ ಆಶೀರ್ವಾದ ಪಡೆದಿದ್ದಾರೆ.

ಕೇರಳದ ಕಣ್ಣೂರು ಜಿಲ್ಲೆಯ ಪಯ್ಯನೂರು ಬಳಿಯ ಮಾಡಾಯಿಯಲ್ಲಿರುವ ಮಾಡಾಯಿ ಕಾವು ದೇವಸ್ಥಾನ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಈ ದೇವಸ್ಥಾನಕ್ಕೆ ರಾಜಕಾರಣಿಗಳೂ ಬರುತ್ತಾರೆ. ಇಲ್ಲಿ ವಿಶೇಷವಾಗಿ ಶತ್ರು ಸಂಹಾರ ಪೂಜೆಯನ್ನು ಮಾಡಿಸುತ್ತಾರೆ. ಶ್ರೀ ತಿರುವರ್ಕ್ಕಟ್ಟು ಕಾವು ಭಗವತಿ ದೇವಸ್ಥಾನವು ಭಕ್ತರಿಗೆ ಕೋಳಿ ಖಾದ್ಯವನ್ನು ‘ಪ್ರಸಾದ’ವಾಗಿ ಬಡಿಸುವ ಪದ್ಧತಿಯನ್ನು ಅನುಸರಿಸುತ್ತಿದೆ.

ದೇವಸ್ಥಾನದ ಹಲವಾರು ಭಕ್ತರಲ್ಲಿ ಬಿಜೆಪಿ ನಾಯಕ ಮತ್ತು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೂಡ ಸೇರಿದ್ದಾರೆ. ಅವರು ದೇವಸ್ಥಾನಕ್ಕೆ ಊಟದ ಹಾಲ್ ಅನ್ನು ಸಹ ದಾನ ಮಾಡಿದ್ದರು. 2016 ರಲ್ಲಿ ಕೊನೆಯ ಬಾರಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಯಡೂರಪ್ಪ, ಡಿಸೆಂಬರ್ 26, 2009 ರಂದು ‘ಅಮೃತದಯಾನಿ ಊಟುಪುರ’ ಎಂಬ ಊಟದ ಹಾಲ್ ಅನ್ನು ಉದ್ಘಾಟಿಸಿದ್ದರು ಎಂದು ದೇವಸ್ಥಾನದ ಅಧಿಕಾರಿಗಳು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *