ಮಂಗಳೂರು: ನಟ ದರ್ಶನ್ ಅವರು ಕುತ್ತಾರು ಕೊರಗಜ್ಜನ ಆದಿಸ್ಥಳಕ್ಕೆ ಭೇಟಿ ನಿಡಿ ಕೊರಗಜ್ಜನ ಆಶೀರ್ವಾದವನ್ನು ಪಡೆದರು. ಈ ಸಂದರ್ಭದಲ್ಲಿ ದೈವಸ್ಥಾನದ ಆಡಳಿತ ಮಂಡಳಿ ವತಿಯಿಂದ ಅವರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಂಗಳೂರಿಗೆ ಸುಮಾರು ಸಲ ಬಂದಿದ್ದೆ. ಆದರೆ, ಕುತ್ತಾರಿಗೆ ಬರೋದಕ್ಕೆ ಆಗ್ಲಿಲ್ಲ. ಎಲ್ರು ಹೇಳ್ತಾಯಿದ್ರು ಈ ಕ್ಷೇತ್ರದ ಬಗ್ಗೆ, ಹಾಗಾಗಿ ಭೇಟಿ ನೀಡಿ ಪ್ರಾರ್ಥಿಸಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಹಾಸ್ಯ ನಟ ಚಿಕ್ಕಣ್ಣ, ಪ್ರಶಾಂತ್ ಮಾರ್ಲ, ಮಹಾಬಲ ಶೆಟ್ಟಿ , ವಿದ್ಯಾಚರಣ್ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಪ್ರೀತಮ್ ಶೆಟ್ಟಿ ಹಾಗೂ ಕೊರಗಜ್ಜ ಆದಿಸ್ಥಳ ದೆಕ್ಕಾಡುವಿನ ಟ್ರಸ್ಟಿಗಳು ಉಪಸ್ಥಿತರಿದ್ದರು.