ಸಿನಿಮಾವೊಂದರ ಶೂಟಿಂಗ್ ವೇಳೆ ನಟಿ ಸಮಂತಾ ಗಾಯಗೊಂಡಿದ್ದಾರೆ. ‘ಗಾಯ ಆಗದೆ ನಾನು ಆಕ್ಷನ್ ಸ್ಟಾರ್ ಆಗಲು ಸಾಧ್ಯವೇ?’ ಎಂದು ಸಾಮಾಜಿಕ ಜಾಲತಾಣದಲ್ಲಿ ಅವರು ಪೋಸ್ಟ್ ಹಾಕಿದ್ದಾರೆ. ಮೊಣಕಾಲಿಗೆ ಸೂಜಿ ಚುಚ್ಚಿ ಚಿಕಿತ್ಸೆ ನೀಡುತ್ತಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಗಾಯ ಹೇಗೆ ಆಯಿತು ಎಂಬುದು ತಿಳಿದುಬಂದಿಲ್ಲ. ಈ ಫೋಟೋ ನೋಡಿ ಆತಂಕಗೊಂಡಿರುವ ಅಭಿಮಾನಿಗಳು ನಟಿಯ ಆರೋಗ್ಯ ವಿಚಾರಿಸುತ್ತಿದ್ದಾರೆ