ಬಂಟ್ವಾಳದಲ್ಲಿ ಅಧಿವಕ್ತಾ ಪರಿಷತ್  ದಿನಾಚರಣೆ, ಹಿರಿಯ ವಕೀಲ ಜೇಸಿ ಶಂಕರ ಭಟ್ ಗೆ ಸನ್ಮಾನ

Share with


ಬಂಟ್ವಾಳ ಸೆ.18 : ನ್ಯಾಯವಾದಿಗಳು ರಾಷ್ಟ್ರೀಯ ವಿಚಾರಧಾರೆಯ ಚಿಂತನೆಯಿಂದ ದೇಶಮೊದಲು ಎಂಬುದನ್ನು ಅರಿತು ಸಮಾಜವನ್ನು ತಿದ್ದುವ ಕೆಲಸ ಮಾಡಬೇಕು. ರಾಷ್ಟ್ರೀಯ ಅಭಿವೃದ್ಧಿಗೆ  ತಮ್ಮ ಕೊಡುಗೆಯನ್ನು ನೀಡಬೇಕು ಎಂದು ಅಧಿವಕ್ತಾ ಪರಿಷತ್ತಿನ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಗುರುಪ್ರಸಾದ್ ಹೇಳಿದರು.
ಅವರು ಬಿ.ಸಿ.ರೋಡು ರಕ್ತೇಶ್ವರಿ ದೇವಸ್ಥಾನದ ಸಭಾಂಗಣದಲ್ಲಿ ಅಧಿವಕ್ತಾ ಪರಿಷತ್ ಬಂಟ್ವಾಳ ಘಟಕದ ಆಶ್ರಯದಲ್ಲಿ ಏರ್ಪಡಿಸಲಾದ ಪರಿಷತ್ತಿನ ಸ್ಥಾಪನಾ ದಿನಚರಣೆಯ ಸಂದರ್ಭದಲ್ಲಿ ಪರಿಷತ್ತಿನ ಕಾರ್ಯವಿಧಾನಗಳ ಬಗ್ಗೆ ಮಾತನಾಡಿ ದತ್ತೋಪಂತ ಠೇಂಗಡಿಯವರು ಸ್ಥಾಪನೆ ಮಾಡಿದ ವಕೀಲರ ಸಂಘಟನೆಗೆ ದೇಶಾದ್ಯಂತ ರಾಷ್ಟ್ರೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು .
ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ರಿಚರ್ಡ್ ಡಿ ಕೋಸ್ತ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ವಕೀಲರು ಸಕಾರಾತ್ಮಕವಾದ ಭಾವನೆಯಿಂದ ತಮ್ಮ ವುಕ್ತಿತ್ವವನ್ನು ಬೆಳೆಸಿಕೊಂಡು ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಪರಿಷತ್ತಿನ ಬಂಟ್ವಾಳ ಘಟಕದ ಅಧ್ಯಕ್ಷೆ ಉಮಾ ಎನ್. ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.  ಹಿರಿಯ ವಕೀಲ ಬಂಟ್ವಾಳ ವಕೀಲರ ಸಂಘದ ಮಾಜಿ ಅಧ್ಯಕ್ಷ ಜತ್ತನಕೋಡಿ ಶಂಕರ ಭಟ್ ಇವರನ್ನು ಸಾಮಾಜಿಕ ಮತ್ತು ಧಾರ್ಮಿಕ ಸೇವೆಯನ್ನು ಪರಿಗಣಿಸಿ ಸನ್ಮಾನಿಸಲಾಯಿತು.  ನ್ಯಾಯವಾದಿ ಉಮೇಶ್ ಕುಮಾರ್ ಏನಾಜೆ ಅಭಿನಂದಿಸಿದರು.ವಕೀಲರಾದ ಪ್ರಸಾದ್ ಕುಮಾರ್ ರೈ ವಂದಿಸಿದರು. ವೀರೇಂದ್ರ ಸಿದ್ದಕಟ್ಟೆ ನಿರೂಪಿಸಿದರು.


Share with

Leave a Reply

Your email address will not be published. Required fields are marked *