
ಪೈವಳಿಕೆ: ಗಂಗೂಬಾಯಿ ಹಾನಗಲ್ ಯೂನಿವರ್ಸಿ ಟಿ ಮೈಸೂರು ನಡೆಸಿದ ಭರತನಾಟ್ಯ ವಿದ್ವತ್ ಅಂತಿಮ ಪರೀಕ್ಷೆಯಲ್ಲಿ ಆದಿಶ್ರೀ ಎಸ್ ಎನ್ ಶೆಟ್ಟಿಗಾರ್ ಬಾಯಿಕಟ್ಟೆ ಈಕೆ ಡಿಷ್ಟಿಂಕ್ಷನ್ ನಲ್ಲಿ ತೇರ್ಗಡೆ ಹೊಂದಿರುತ್ತಾಳೆ. ಈಕೆ ವಿದುಷಿ ಡಾ. ವಿದ್ಯಾಲಕ್ಷ್ಮಿ, ನಾಟ್ಯ ವಿದ್ಯಾನಿಲಯ ಕುಂಬಳೆ ಇವರ ಶಿಷ್ಯೆ ಹಾಗೂ ನಾರಾಯಣ ಶೆಟ್ಟಿಗಾರ್-ಶಶಿಕಲ ದಂಪತಿ ಪುತ್ರಿಯಾಗಿದ್ದಾಳೆ.





