15 ಪತ್ನಿಯರು, 30 ಮಕ್ಕಳು, 100 ಸೇವಕರೊಂದಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಆಫ್ರಿಕನ್ ರಾಜ, ಮುಂದೇನಾಯ್ತು ನೋಡಿ

Share with

ಅಬುಧಾಬಿ, ಅಕ್ಟೋಬರ್ 06: ಯಾವುದೇ ದೇಶದ ಪ್ರಮುಖ ವ್ಯಕ್ತಿಗಳು ತಮ್ಮ ನೆರೆಯ ದೇಶಕ್ಕೆ ಭೇಟಿ ನೀಡಿದಾಗ ಅವರ ಆಗಮನವು ಅದ್ದೂರಿಯಾಗಿರುತ್ತದೆ. ಆ ದೇಶದ ಪ್ರಮುಖ ನಾಯಕರು ರಾಷ್ಟ್ರಕ್ಕೆ ಬಂದ ವ್ಯಕ್ತಿಯನ್ನು ಆತ್ಮೀಯವಾಗಿ ಸ್ವಾಗತ ಕೋರುವ ದೃಶ್ಯವು ಸಹಜವಾಗಿ ಎಲ್ಲರ ಗಮನ ಸೆಳೆಯುತ್ತದೆ. ಆದರೆ ಆಫ್ರಿಕನ್ ರಾಜನ (African King) ಆಗಮನವು ಈ ಕಾರಣದಿಂದಲೇ ಸುದ್ದಿಯಾಗಿದೆ. ಹೌದು, ಆಫ್ರಿಕನ್ ರಾಜ ಎಂಸ್ವತಿ III ತನ್ನ 15 ಪತ್ನಿಯರು, 30 ಮಕ್ಕಳು ಮತ್ತು 100 ಸೇವಕರೊಂದಿಗೆ ಅಬುಧಾಬಿ ವಿಮಾನ ನಿಲ್ದಾಣಕ್ಕೆ (Abu Dhabi airport) ಖಾಸಗಿ ಜೆಟ್‌ನಲ್ಲಿ ಬಂದಿಳಿದಿದ್ದು, ಈ ವಿಡಿಯೋ  ಸದ್ಯ ಸಖತ್‌  ವೈರಲ್ ಆಗುತ್ತಿದೆ.

ಆಫ್ರಿಕನ್ ರಾಜನ ಆಗಮನದ ದೃಶ್ಯ
fun factorss ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಲಾದ ವಿಡಿಯೋದಲ್ಲಿ ಯುಎಇ ಅಬುಧಾಬಿ ವಿಮಾನ ನಿಲ್ದಾಣದಲ್ಲಿ ಖಾಸಗಿ ಜೆಟ್‌ನಲ್ಲಿ ಆಫ್ರಿಕನ್ ರಾಜ ಮ್ಸ್ವಾಟಿ ಬಂದು ಇಳಿಯುತ್ತಿರುವುದನ್ನು ಕಾಣಬಹುದು. ಅರ್ಧಂಬರ್ಧ ಸಾಂಪ್ರದಾಯಿಕ ಉಡುಗೆ ತೊಟ್ಟಿದ್ದ ಈ ಆಫ್ರಿಕನ್ ರಾಜನಿಗೆ ಅಲ್ಲಿದ್ದ ವ್ಯಕ್ತಿ ತಲೆಬಾಗಿ ನಮಸ್ಕರಿಸುತ್ತಿರುವುದನ್ನು ನೀವು ನೋಡಬಹುದು. ರಾಜ ಮ್ಸ್ವಾಟಿ ಚಿರತೆ ಚರ್ಮದ ಮಾದರಿಯ ಸಾಂಪ್ರದಾಯಿಕ ಉಡುಪನ್ನು ಧರಿಸಿದರೆ, ಪತ್ನಿಯರು ಆಕರ್ಷಕವಾದ ಆಫ್ರಿಕನ್ ಉಡುಗೆಗಳನ್ನು ಧರಿಸಿರುವುದನ್ನು ಕಾಣಬಹುದು.


Share with

Leave a Reply

Your email address will not be published. Required fields are marked *