ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪೈವಳಿಕೆ ವಲಯದ ಆಶ್ರಯದಲ್ಲಿ ಕೃಷಿ ತರಬೇತಿ

Share with


ಉಪ್ಪಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಪೈವಳಿಕೆ ವಲಯದ ಆಶ್ರಯದಲ್ಲಿ ರೈತ ಕ್ಷೇತ್ರ ಪಾಠಶಾಲೆ ಕಾರ್ಯ ಕ್ರಮದಡಿಯಲ್ಲಿ  ಮಣ್ಣು ಪರೀಕ್ಷೆ ಮತ್ತು ಸಸ್ಯ ಪೋಷಕಾಂಶಗಳ ನಿರ್ವಹಣೆ ಈ ವಿಚಾರದ ಕುರಿತು ಕೃಷಿ ತರಬೇತಿಯನ್ನು ಪೈವಳಿಕೆ   ವಲಯದ  ಕುಬಣೂರು ಕಾರ್ಯ ಕ್ಷೇತ್ರದ ಶ್ರೀ ಸತ್ಯನಾರಾಯಣ ಭಜನಾ ಮಂದಿರದ ಆವರಣದಲ್ಲಿ ನಡೆಸಲಾಯಿತು.ತರಬೇತಿಯ ಸಭಾಧ್ಯಕ್ಷತೆಯನ್ನು ಒಕ್ಕೂಟದ ಅಧ್ಯಕ್ಷ  ಅರುಣಾವತಿ ಅವರು ವಹಿಸಿದ್ದು, ಸಭೆಯ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದಂತಹ  ಸತೀಶ್ ಶೆಟ್ಟಿ ಇವರು ನೆರವೇರಿಸಿದರು.ವೇದಿಕೆಯಲ್ಲಿ ಕೃಷಿಕರಾದ   ಎಂ ಆರ್ ಕೊರಗಪ್ಪ ಶೆಟ್ಟಿ, ಸಂಪನ್ಮೂಲ ವ್ಯಕ್ತಿ ಮಂಗಲ್ಪಾಡಿ  ಕೃಷಿ ಭವನದ ಕೃಷಿ ಅಧಿಕಾರಿ  ಅರುಣ್ ಪ್ರಸಾದ್, ವಲಯ ಮೇಲ್ವಿಚಾರಕರಾದ ಸಹದೇವ್ ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು.ಸಂಪನ್ಮೂಲ ವ್ಯಕ್ತಿ ಮಂಗಲ್ಪಾಡಿ ಕೃಷಿ ಭವನದ ಕೃಷಿ ಅಧಿಕಾರಿ  ಅರುಣ್ ಪ್ರಸಾದ್  ರವರು  ಮಣ್ಣು ಪರೀಕ್ಷೆಯನ್ನು ಯಾಕೆ ಮಾಡಬೇಕು, ಮಣ್ಣು ಪರೀಕ್ಷೆ ಮಾಡುವುದರಿಂದ ಆಗುವಂತಹ ಪ್ರಯೋಜನಗಳು , ಮಣ್ಣು ಪರೀಕ್ಷೆ ಮಾಡಲು ಯಾವ ಜಾಗದಿಂದ ಮಣ್ಣನ್ನು ತೆಗೆಯಬೇಕು ಹಾಗೂ ಹೇಗೆ ತೆಗೆಯಬೇಕು,  ಬೆಳೆಗಳಿಗೆ  ಬರುವಂತಹ ರೋಗಗಳು, ಬೆಳೆಗೆ ಬೇಕಾಗುವಂತಹ ಪೋಷಕಾಂಶಗಳು, ಮಣ್ಣಿನ ಪಿ ಎಚ್ ಮಟ್ಟ, ಔಷಧಿ ಸಿಂಪಡಣೆ ಬಗ್ಗೆ ತರಬೇತಿಯನ್ನು ನೀಡಿದರು. 29 ಸದಸ್ಯರು ಭಾಗವಹಿಸಿದ ತರಬೇತಿ ಕಾರ್ಯ ಕ್ರಮದಲ್ಲಿ ಸದಸ್ಯರು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.   ಸ್ಥಳೀಯ  ಸೇವಾ ಪ್ರತಿನಿಧಿ ಸುಜಾತ ಹಾಗೂ ವಸಂತಿ ಭಾಗವಹಿಸಿದ್ದು,  ವಲಯ ಮೇಲ್ವಿಚಾರಕ ಸಹದೇವ್ ಸ್ವಾಗತಿಸಿ, ಮೇಲ್ವಿಚಾರಕಿ ಪ್ರಿಯಾ ನಿರೂಪಿಸಿ, ಸೇವಾ ಪ್ರತಿನಿಧಿ ಸುಜಾತ  ಧನ್ಯವಾದವಿತ್ತರು.


Share with

Leave a Reply

Your email address will not be published. Required fields are marked *