ವಯನಾಡ್‌ ಕ್ಷೇತ್ರದ ಉಪ ಚುನಾವಣೆಗೆ ಅಭ್ಯರ್ಥಿ ಘೋಷಿಸಿದ ಎಐಸಿಸಿ

Share with

ಹೊಸದಿಲ್ಲಿ: ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರದ ಬಹು ನಿರೀಕ್ಷಿತ ಉಪಚುನಾವಣೆಗೆ ನ.13ರಂದು ಚುನಾವಣೆ ಆಯೋಗ ದಿನಾಂಕ ನಿಗದಿಪಡಿಸಿದ ಬೆನ್ನಲ್ಲೇ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ  ಹಿಡಿತದಲ್ಲಿದ್ದ ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಪ್ರಿಯಾಂಕಾ ವಾದ್ರಾ ಹೆಸರು ಅಂತಿಮಗೊಳಿಸಿ ಎಐಸಿಸಿ (ಭಾರತ ರಾಷ್ಟ್ರೀಯ ಕಾಂಗ್ರೆಸ್‌) ಅಧಿಕೃತ ಪ್ರಕಟಣೆ ಹೊರಡಿಸಿದೆ.

ಈ ಮೂಲಕ ಮೊದಲ ಬಾರಿಗೆ ಚುನಾವಣಾ ರಾಜಕೀಯಕ್ಕೆ ಪ್ರಿಯಾಂಕಾ ವಾದ್ರಾ ಪ್ರವೇಶ ಪಡೆಯಲಿದ್ದಾರೆ. ಈ ಹಿನ್ನೆಲೆಯಲ್ಲಿ ವಯನಾಡ್‌ ಲೋಕಸಭಾ ಕ್ಷೇತ್ರದ  ಉಪ ಚುನಾವಣೆ ಕೌತುಕ ಹೆಚ್ಚಿಸಿದೆ. 2024ರ ಲೋಕಸಭೆ ಚುನಾವಣೆಯಲ್ಲಿ  ರಾಹುಲ್‌ ಗಾಂಧಿ  ವಯನಾಡ್‌ ಹಾಗೂ ಉತ್ತರ ಪ್ರದೇಶದ ರಾಯ್‌ ಬರೇಲಿ ಕ್ಷೇತ್ರಗಳಿಂದ ಸ್ಪರ್ಧಿಸಿ ಎರಡರಲ್ಲೂ ಜಯ ಸಾಧಿಸಿದ್ದರು. ಬಳಿಕ ಕಾಂಗ್ರೆಸ್‌ನ  ಗಾಂಧಿ ಕುಟುಂಬದ ಪಾರಂಪರಿಕ ಕ್ಷೇತ್ರವಾದ ರಾಯ್‌ ಬರೇಲಿಗೆ ಸಂಸದರಾಗಲು ಬಯಸಿದ್ದರಿಂದ  ವಯನಾಡ್‌ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಖಾಲಿಯಾಗುವಂತಾಗಿದೆ.

ಅಭ್ಯರ್ಥಿಗಳ ಘೋಷಿಸಿದ ಎಐಸಿಸಿ:
ಇದೀಗ ಕೇಂದ್ರ ಚುನಾವಣಾ ಆಯೋಗ ಚುನಾವಣೆಗೆ ದಿನಾಂಕ ಘೋಷಿಸಿದ ಬೆನ್ನಲ್ಲೇ ವಯನಾಡ್‌  ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಪ್ರಿಯಾಂಕಾ ವಾದ್ರಾ ಹಾಗೂ ಕೇರಳದ ಪಾಲಕ್ಕಾಡ್‌  ವಿಧಾನಸಭಾ ಕ್ಷೇತ್ರಕ್ಕೆ ರಾಹುಲ್‌ ಮಮುಕುಟ್ಟಿಲ್‌,  ಚಲೆಕ್ಕರ ವಿಧಾನಸಭಾ ಕ್ಷೇತ್ರಕ್ಕೆ ರಮ್ಯಾ ಹರಿದಾಸ್‌ ಹೆಸರು ಘೋಷಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಪ್ರಕಟಣೆ ಹೊರಡಿಸಿದ್ದಾರೆ.
ಉಪಚುನಾವಣೆಯ ಫಲಿತಾಂಶ  ನ.23ರಂದು ಹೊರಬೀಳಲಿದ್ದು, ಒಂದು ವೇಳೆ ಪ್ರಿಯಾಂಕಾ ಗೆಲುವು ಸಾಧಿಸಿದರೆ ಪ್ರಸಕ್ತ ಸಂಸತ್ತಿನಲ್ಲಿ ಅವರು ಗಾಂಧಿ ಕುಟುಂಬದ ಮೂರನೇ ಸಂಸದರಾಗಲಿದ್ದಾರೆ.


Share with

Leave a Reply

Your email address will not be published. Required fields are marked *