ಮಂಗಳೂರು: ಏರ್ ಇಂಡಿಯಾ ಎಕ್ಸ್‌ಪ್ರೆಸ್ ಸಿಬ್ಬಂದಿಗಳು ಅಕ್ಷರ ಸಂತ, ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ವಿಮಾನದೊಳಗೆ ಅಭಿನಂದಿಸಿ ಗೌರವಿಸಿದ್ದಾರೆ.
ಹಿದಾಯ ಫೌಂಡೇಶನ್ ಜುಬೈಲ್ ಘಟಕದ ವತಿಯಂದ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಹರೇಕಳ ಹಾಜಬ್ಬ ಅವರು ಮಂಗಳೂರಿನಿಂದ ದಮ್ಮಾಮ್ ಗೆ ಏರ್ ಇಂಡಿಯ ಎಕ್ಸ್ ಪ್ರೆಸ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.
ಹರೇಕಳ ಹಾಜಬ್ಬ ಅವರನ್ನು ಗುರುತಿಸಿದ ಏರ್ ಇಂಡಿಯ ಎಕ್ಸ್ ಪ್ರೆಸ್ ನ ಸಿಬ್ಬಂದಿಗಳು ಕ್ಯಾಪ್ಟನ್ ನ ಗಮನಕ್ಕೆ ತಂದರು. ಕ್ಯಾಪ್ಟನ್ ವಿಮಾನದಲ್ಲಿರುವ ಪ್ರಯಾಣಿಕರಿಗೆ ಹಾಜಬ್ಬ ಅವರನ್ನು ಪರಿಚಯಿಸುತ್ತಾ “ಶಿಕ್ಷಣ ರಂಗದಲ್ಲಿ ಅಪೂರ್ವ ಸೇವೆ ಸಲ್ಲಿಸಿ ಪದ್ಮಶ್ರೀ ಪ್ರಶಸ್ತಿ ಪಡೆದ ಹರೇಕಳ ಹಾಜಬ್ಬ ಅವರು ನಮ್ಮ ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ನಮಗೆಲ್ಲ ತುಂಬಾ ಸಂತೋಷ ತಂದಿದೆ, ಅವರಿಗೆ ಹೃದಯ ತುಂಬಿದ ಅಭಿನಂದನೆಗಳು” ಎಂದರು.
ಪ್ರೇರಣಾ ಭಾಷಣಗಾರ ರಫೀಕ್ ಮಾಸ್ಟರ್ ಮಂಗಳೂರು ಮತ್ತು ಉದ್ಯಮಿ ಫಾರೂಕ್ ಕನ್ಯಾನ ಪೋರ್ಟ್ ವೇ ಈ ಸಂದರ್ಭದಲ್ಲಿ ಹಾಜಬ್ಬ ಅವರ ಜೊತೆಗಿದ್ದರು.