ದೆಹಲಿ ಏರ್ಪೋರ್ಟ್ ನಲ್ಲಿ Air India ಎಕ್ಸ್ಪ್ರೆಸ್ (AIX) ಪೈಲಟ್ ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು SpiceJet ಪ್ರಯಾಣಿಕ ಅಂಕಿತ್ ದೇವನ್ ಆರೋಪಿಸಿದ್ದಾರೆ.

ಕ್ಯೂ ಲೈನ್ ದಾಟಿದ್ದನ್ನು ಪ್ರಶ್ನಿಸಿದಾಗ ಕೋಪಗೊಂಡ ಪೈಲಟ್ ತನ್ನ ಮುಖಕ್ಕೆ ಹೊಡೆದಿದ್ದಾರೆ ಎಂದು ಅವರು Xನಲ್ಲಿ ಪೋಸ್ಟ್ ಮಾಡಿದ್ದಾರೆ. ಗಾಯದ ಫೋಟೋವನ್ನು ಸಹ ಅವರು ಲಗತ್ತಿಸಿದ್ದಾರೆ. ಘಟನೆ ವೇಳೆ ಪೈಲಟ್ ಡ್ಯೂಟಿಯಲ್ಲಿರಲಿಲ್ಲ. ಆದರೂ ಅವರನ್ನು ಸಸ್ಪೆಂಡ್ ಮಾಡಲಾಗಿದ್ದು, ತನಿಖೆಗೆ ಆದೇಶಿಸಲಾಗಿದೆ ಎಂದು AIX ಹೇಳಿದೆ.




