ಕೊಂಡೆವೂರಿನ ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ದಿ.24.03.2024ರಂದು ಸೂರ್ಯಾಸ್ತಕ್ಕೆ ಆರಂಭಗೊಂಡ ಅಖಂಡ ಭಜನಾಸಪ್ತಾಹವು ಮಾರ್ಚ್ 31ರ ಸೂರ್ಯಸ್ತಮಾನ ವೇಳೆಯಲ್ಲಿ ಕೊಂಡೆವೂರು ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಹಾಗೂ ತುಂಬಿದ ಭಕ್ತರ ಸಮ್ಮುಖದಲ್ಲಿ ಮಂಗಳಾಚರಣೆಯು ಸಂಪನ್ನಗೊಂಡಿತು. ಸುಮಾರು 170ಕ್ಕೂ ಹೆಚ್ಚಿನ ಭಜನಾ ತಂಡಗಳು ಭಾಗವಹಿಸಿ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.