ಅಕ್ಷಯ ಕಾಲೇಜ್ : ಎನ್ ಎಸ್ ಎಸ್ ವತಿಯಿಂದ ಭ್ರಷ್ಟಾಚಾರದ ವಿರುದ್ಧ ಪ್ರಮಾಣ ವಿಧಿ ಸ್ವೀಕಾರ

Share with

ಪುತ್ತೂರು: ಅಕ್ಷಯ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಕ್ಷಯ ಕಾಲೇಜಿನಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕಗಳ  ನೇತೃತ್ವದಲ್ಲಿ ಮತ್ತು ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಹಭಾಗಿತ್ವದಲ್ಲಿ ಕಾಲೇಜಿನ ಸಭಾಂಗಣದಲ್ಲಿ. ಭ್ರಷ್ಟಾಚಾರದ ವಿರುದ್ಧ ಪ್ರಮಾಣ ವಿಧಿ  ಸ್ವೀಕಾರ ನಡೆಸಲಾಯಿತು.
ರಾಷ್ಟ್ರೀಯ ಸೇವಾ ಯೋಜನೆಯ ಘಟಕ 1 ರ  ಕಾರ್ಯಕ್ರಮಮಾಧಿಕಾರಿ ಶ್ರೀಯುತ  ಕಿಶೋರ್ ಕುಮಾರ್ ರೈ ಪ್ರಮಾಣ ವಿಧಿ ಬೋಧಿಸಿದರು. 
ಕಾರ್ಯಕ್ರಮದಲ್ಲಿ ಪ್ರಾಂಶುಪಾಲರಾದ ಶ್ರೀ ಸಂಪತ್ ಕೆ ಪಕ್ಕಳ, ಆಡಳಿತಾಧಿಕಾರಿಯಾದ ಶ್ರೀ ಅರ್ಪಿತ್ ಟಿ ಎ,    ಕಾಲೇಜಿನ ಆಂತರಿಕ ಗುಣಮಟ್ಟದ ಭರವಸೆ ಕೋಶ ಸಂಯೋಜಕ ರಾದ ಕುಮಾರಿ ಭವ್ಯ ಶ್ರೀ, ರಾಷ್ಟ್ರೀಯ ಸೇವಾ ಯೋಜನೆಯ ಘಟಕ 2 ರ  ಕಾರ್ಯಕ್ರಮಮಾಧಿಕಾರಿ ಕುಮಾರಿ ಮೇಘ ಶ್ರೀ, ಎನ್ ಎಸ್ ಎಸ್  ಘಟಕ ಗಳ ವಿದ್ಯಾರ್ಥಿ ನಾಯಕ, ನಾಯಕಿ ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಪಕ ಪ್ರಾಧ್ಯಾಪಕಿ  ಯರು  , ವಿದ್ಯಾರ್ಥಿಗಳು, ರಾಷ್ಟ್ರೀಯ ಸೇವಾ ಯೋಜನೆಯ ಸೇವಕರು ಸೇರಿದಂತೆ. ಭ್ರಷ್ಟಾಚಾರದ   ವಿರುದ್ಧ ಪ್ರಮಾಣ ವಿಧಿ ಸ್ವೀಕರಿಸಿದರು. ಭ್ರಷ್ಟಾಚಾರದ ಕುರಿತು ಜನ ಜಾಗೃತಿ ಮೂಡಿಸುವ ವಿಜಿಲೆನ್ಸ್ ಸಪ್ತಾಹ  ದ ಭಾಗವಾಗಿ ಭ್ರಷ್ಟಾಚಾರದ ಕುರಿತು ವಿದ್ಯಾರ್ಥಿಗಳಿಗೆ  ಭಾಷಣ ಸ್ಪರ್ಧೆ, ಚರ್ಚಾ ಸ್ಪರ್ಧೆ ಗಳನ್ನು  ಏರ್ಪಡಿಸಲಾಗಿತ್ತು.


Share with

Leave a Reply

Your email address will not be published. Required fields are marked *