ಪುತ್ತೂರು: ಬೆಂಗಳೂರಿನಲ್ಲಿ N B ಮಾಡೆಲ್ ಮ್ಯಾನೇಜ್ಮೆಂಟ್ ಸಂಸ್ಥೆ ಆಯೋಜಿಸಿದ್ದ ಮಿಸ್ಟರ್ – ಮಿಸ್ ಟೀನ್ ಕರ್ನಾಟಕ ಸೌಂದರ್ಯ ಸ್ಪರ್ಧೆಯಲ್ಲಿ ಸುಮಾರು 35 ಸ್ಪರ್ಧಿಗಳು 3 ವಿಭಾಗದಲ್ಲಿ ಭಾಗವಹಿಸಿದ್ದು, ಮಿಸ್ಟರ್ ಕರ್ನಾಟಕ ವಿಭಾಗದಲ್ಲಿ ಪುತ್ತೂರು ಅಕ್ಷಯ ಕಾಲೇಜಿನ ವಿದ್ಯಾರ್ಥಿ ವಚನ್ ಎಸ್ ರವರು ವಿನ್ನರ್ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ಉಪ್ಪಿನಂಗಡಿ ಪೆರಿಯಡ್ಕ ನಿವಾಸಿಗಳಾದ ಶೇಖರ ಪೂಜಾರಿ ಹಾಗೂ ರೂಪಾ ದಂಪತಿ ಪುತ್ರರಾದ ಇವರು ಪುತ್ತೂರಿನ ಅಕ್ಷಯ ಕಾಲೇಜಿನಲ್ಲಿ ತೃತೀಯ ವರ್ಷದ ಫ್ಯಾಷನ್ ಡಿಸೈನ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.