ಅಲಂಗೋಡು ಶ್ರೀ ಧೂಮಾವತಿ ದೈ ವಸ್ಥಾನದ ನವೀಕರಣ ಪುನಃ ಪ್ರತಿಷ್ಟಾ ಕಲಾಶೋತ್ಸವ; ಆಮಂತ್ರಣ ಪತ್ರ ಬಿಡುಗಡೆ

Share with

ಕಾಸರಗೋಡು: ಕೂಡ್ಲು ಗ್ರಾಮದ ಮನ್ನಿಪಾಡಿಯ ಅಲಂಗೋಡು ಶ್ರೀ ಧೂಮಾವತಿ ದೈ ವಸ್ಥಾನದ ನವೀಕರಣ ಪುನಃ ಪ್ರತಿಷ್ಟಾ ಕಲಾಶೋತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಸಮಾರಂಭ ಆಲಂಗೋಡು ಶ್ರೀ ಧೂಮಾವತಿ ದೈವಸ್ಥಾನದಲ್ಲಿ ಜರಗಿತು.

ಸಭೆಯ ಅಧ್ಯಕ್ಷತೆಯನ್ನು ಕ್ಷೇತ್ರದ ಮೊಕ್ತೆಸರ ಕೆ.ಜಿ ಶ್ಯಾನ್ ಭೋಗ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಕೆ.ಪಿ ಜಯರಾಜ್, ( ಟ್ರಸ್ಟಿ ಕಾನತೂರು ದೇವಸ್ಥಾನ ) ಶಶಿಧರ ಎಂ.ಗಟ್ಟಿ (ಸಹಾಯಕ ವಿದ್ಯಾಧಿಕಾರಿ ಕುಂಬಳೆ) ಉಪಜಿಲ್ಲಾ, ಎನ್ ಸತೀಶ್, ಸುರೇಶ್ ಮಣಿಯಾಣಿ, ನಾರಾಯಣ ಬೋವಿಕಾನ( ನವೀಕರಣ ಸಮಿತಿ ಅಧ್ಯಕ್ಷ ) ಉದಯಕುಮಾರ್ ಮನ್ನಿಪಾಡಿ ( ಸೇವಾ ಸಮಿತಿ ಅಧ್ಯಕ್ಷ, ನವೀಕರಣ ಸಮಿತಿಯ ಪ್ರಧಾನ ಕಾರ್ಯದರ್ಶಿ,) ಲತಾ ನಂದಗೋಪಾಲ ( ಮಹಿಳಾ ಸಮಿತಿ ಅಧ್ಯಕ್ಷೆ) ನಾಗೇಶ್ ಗಟ್ಟಿ ( ನವೀಕರಣ ಸಮಿತಿ ಕೋಶಾಧಿಕಾರಿ ) ಕೃಷ್ಣ ಕಲೈಪಾಡಿ, ಶಂಕರ ಕಲೈ ಪಾಡಿ, ಕೃಪ ಕೆ.ಜಿ, ಶ್ರೀ ಕುಜ್ಞಿ ರಾಮಮಣಿಯಾಣಿ ಹಾಗೂ ಮೊದಲಾದವರು ಉಪಸ್ಥಿತರಿದ್ದರು.

ಗಣೇಶ್ ಗಟ್ಟಿ ಸ್ವಾಗತಿಸಿದರು. ಓಮನ ರವಿ ಧನ್ಯವಾದಗೈದರು.


Share with

Leave a Reply

Your email address will not be published. Required fields are marked *