ಮಂಗಳೂರು: ಪೊಲೀಸರು ನ.30ರಂದು ವಿವಿಧೆಡೆ ಕಾರ್ಯಾಚರಣೆ ನಡೆಸಿ ಡ್ರಗ್ಸ್ ಸೇವನೆ ಮಾಡುತ್ತಿದ್ದ ಆರೋಪದ ಮೇರೆಗೆ ನಾಲ್ವರನ್ನು ನ.30ರಂದು ಬಂಧಿಸಿದ್ದಾರೆ.
ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರು ಮಂಗಳೂರು ತಾಲೂಕು ತಿರುವೈಲು ಗ್ರಾಮದ ಕೆತ್ತಿಕಲ್ಲಿನಲ್ಲಿ ಮಾದಕ ವಸ್ತು ಸೇವನೆ ಮಾಡಿದ ಆರೋಪದ ಮೇರೆಗೆ ತಿರುವೈಲಿನ ಚರಣ್‌ರಾಜ್(28) ಹಾಗೂ ಉಳಾಯಿಬೆಟ್ಟು ಜಂಕ್ಷನ್‌ನಲ್ಲಿ ಮಾದಕ ದ್ರವ್ಯ ಸೇವನೆ ಮಾಡಿದ ಆರೋಪದ ಮೇರೆಗೆ ಬಂಟ್ವಾಳ ಅಮ್ಟಾಡಿಯ ಕಾರ್ತಿಕ್ ಡಿ(27)ನನ್ನು ಬಂಧಿಸಿದ್ದಾರೆ.
ಮಂಗಳೂರು ನಗರ ಪೊಲೀಸ್ ಕೇಂದ್ರ ಉಪವಿಭಾಗದ ವತಿಯಿಂದ ರಚಿಸಲಾದ ಆ್ಯಂಟಿ ಡ್ರಗ್ ಟೀಮ್‌ನ ಪೊಲೀಸರು ನ.30ರಂದು ಉತ್ತರ ದಕ್ಕೆಯ ಬಳಿ ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ಕಸ್ಬಾ ಬೆಂಗ್ರೆಯ ಮೊಹಮ್ಮದ್ ನೌಷಾದ್(19)ನನ್ನು ಮತ್ತು ಪಂಪ್‌ವೆಲ್ ಬಳಿ ಗಾಂಜಾ ಸೇವನೆ ಮಾಡಿದ ಆರೋಪದ ಮೇರೆಗೆ ಕೃಷ್ಣಪಾರದ ಅಬ್ದುಲ್ ಖಾದರ್(25)ನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.