
ಆಲೂರು: ತಾಲೂಕಿನಾದ್ಯಂತ ಕಳೆದ ಮೂರು ನಾಲ್ಕು ದಿನಗಳಿಂದ ಹೆಚ್ಚು ಮಳೆಯಾಗಿ ರೈತರ ಕೃಷಿ ಚಟುವಟಿಕೆಗೆ ತೊಂದರೆಯಾಗಿದೆ.
ಪಾಳ್ಯ ಹೋಬಳಿ ಚಿಕ್ಕ ಕಣಗಾಲು ಗ್ರಾಮದ ನಾಗೇಶ್ ಅವರ ವಾಸದ ಮನೆ ಬಳಿ ಗಾಳಿ ಮಳೆಗೆ ವಿದ್ಯುತ್ ಕಂಬ ಹಾಗೂ ಮರಗಳು ಧರೆಗೆ ಉರುಳಿ ಬಿದ್ದಿವೆ ಇದರಿಂದ ಯಾವುದೇ ಪ್ರಾಣಪಾಯ ಸಂಭವಿಸಿಲ್ಲ ಮರ ಕಂಬಗಳು ರಸ್ತೆಗೆ ಉರುಳಿ ಬಿದ್ದಿದ್ದರಿಂದ ರಸ್ತೆ ಸಂಪರ್ಕವೂ ಕೂಡ ಸಂಪೂರ್ಣವಾಗಿ ಕಡಿತಗೊಂಡಿದೆ.
ವಿವಿಧ ಗ್ರಾಮಗಳಲ್ಲಿ ರಸ್ತೆ ಸಂಪರ್ಕವೂ ಕೂಡ ಸ್ಥಗಿತಗೊಂಡಿದೆ
ಹಾಗೂ ವಿದ್ಯುತ್ ಸಂಪರ್ಕವೂ ಕೂಡ ಸ್ಥಗಿತಗೊಂಡಿದೆ ಅಲ್ಲಲ್ಲಿ ಮರಗಳು ವಿದ್ಯುತ್ ಕಂಬಗಳು ಉರುಳಿ ಬಿದ್ದಿವೆ.





