ಅಮೆಜಾನ್‌ನಲ್ಲಿ ಮತ್ತೊಮ್ಮೆ ಉದ್ಯೋಗ ಕಡಿತ

Share with

ಅಮೆಜಾನ್ ಮತ್ತೆ ಉದ್ಯೋಗ ಕಡಿತಕ್ಕೆ ಮುಂದಾಗಿದ್ದು, 16,000 ಜನರನ್ನು ವಜಾಗೊಳಿಸುವ ಸಾಧ್ಯತೆ ಇದೆ. ಕಳೆದ ವರ್ಷ ಅಕ್ಟೋಬರ್‌ನಲ್ಲಿ ಅಮೆಜಾನ್ 30,000 ಜನರನ್ನು ವಜಾಗೊಳಿಸಲಿದೆ ಎಂದು ರಾಯಿಟರ್ಸ್ ವರದಿ ಮಾಡಿತ್ತು. ಮೊದಲ ಹಂತದಲ್ಲಿ, ಅದು 14,000 ಜನರನ್ನು ಮನೆಗೆ ಕಳುಹಿಸಿದೆ.

ಈ ತಿಂಗಳ 27 ರಂದು 2ನೇ ಹಂತದ ವಜಾ ಪ್ರಕ್ರಿಯೆ ಆರಂಭವಾಗಲಿದೆ. ಈಗಾಗಲೇ ಮ್ಯಾನೇಜ‌ರ್ ಸುಳಿವು ನೀಡಿದ್ದಾರೆ ಎಂದು ಉದ್ಯೋಗಿಗಳು ಹೇಳುತ್ತಿದ್ದಾರೆ. 2023ರಲ್ಲೂ ಅಮೆಜಾನ್ 27,000 ಉದ್ಯೋಗಿಗಳನ್ನು ವಜಾಗೊಳಿಸಿತ್ತು.


Share with

Leave a Reply

Your email address will not be published. Required fields are marked *