8ನೇ ತರಗತಿ ವಿದ್ಯಾರ್ಥಿಯ ಬ್ಯಾಗ್ ನಲ್ಲಿ ಮದ್ದುಗುಂಡು ಪತ್ತೆ..! ಪೊಲೀಸರಿಂದ ತೀವ್ರ ವಿಚಾರಣೆ

Share with

ಆಲಪ್ಪುಳ: 8ನೇ ತರಗತಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಮದ್ದುಗುಂಡು ಪತ್ತೆಯಾದ ಘಟನೆ ಆಲಪ್ಪುಲದಲ್ಲಿ ನಡೆದಿದೆ.

ಆಲಪ್ಪುಳ ಸಮೀಪ ಕಾರ್ತಿಕಪ್ಪಳ್ಳಿ ಎಂಬಲ್ಲಿನ ಖಾಸಗಿ ಶಾಲೆಯ 8ನೇ ತರಗತಿ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಮದ್ದುಗುಂಡುಗಳು ಪತ್ತೆಯಾಗಿದೆ. ವಿದ್ಯಾರ್ಥಿಗಳು ಮಾದಕವಸ್ತು ಉಪಯೋಗಿಸುತ್ತಿದ್ದಾರೆಯೇ ಎಂದು ತಿಳಿಯಲು ಅಧ್ಯಾಪಕರು ಬ್ಯಾಗ್‌ ಪರಿಶೀಲಿಸುತ್ತಿದ್ದ ವೇಳೆ ಮದ್ದುಗುಂಡು ಪತ್ತೆಯಾಗಿದೆ. ಈ ಬಗ್ಗೆ ಶಾಲಾ ಅಧಿಕಾರಿಗಳು ನೀಡಿದ ಮಾಹಿತಿಯಂತೆ ಪೊಲೀಸರು ಭೇಟಿ ನೀಡಿ ಮದ್ದುಗುಂಡುಗಳನ್ನು ವಶಪಡಿಸಿ ತನಿಖೆ ಆರಂಭಿಸಿದ್ದಾರೆ.

ಇದೇ ವೇಳೆ ಟ್ಯೂಶನ್‌ಗೆ ಹೋಗುತ್ತಿದ್ದಾಗ ಈ ಮದ್ದು ಗುಂಡುಗಳು ಬಿದ್ದುಸಿಕ್ಕಿರುವುದಾಗಿ ವಿದ್ಯಾರ್ಥಿ ಪೊಲೀಸರಲ್ಲಿ ತಿಳಿಸಿದ್ದಾನೆ. ಈತನ ಹೇಳಿಕೆ ಸರಿಯೇ ಎಂದು ತಿಳಿಯಲು ಪರಿಶೀಲನೆ ತೀವ್ರಗೊಳಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *