ಉಪ್ಪಳ: ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತ ನಿಧನರಾದರು. ಮೂಲತ ಅಡ್ಕ ವೀರನಗರ ನಿವಾಸಿಯೂ ಇದೀಗ ಪಂಜದಲ್ಲಿ ವಾಸವಾಗಿರುವ [ದಿ] ಸಂಜೀವ ರವರ ಪುತ್ರ ಅಶೋಕ [೪೫] ನಿಧನರಾದರು. ಎರಡು ತಿಂಗಳಿಂದ ತಲೆಯ ನರಕ್ಕೆ ಸಂಬಂಧಿ ಅಸೌಖ್ಯದಿಂದ ಕಾಸರಗೋಡು ಖಾಸಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಭಾನುವಾರ ಬೆಳಿಗ್ಗೆ ನಿಧನರಾದರು. ಇವರು ಸಂಘ ಪರಿವಾರದ ಸಕ್ರೀಯ ಕಾರ್ಯಕರ್ತರಾಗಿದ್ದರು. ಕುಬಣೂರು ವಿದ್ಯಾನಗರದಲ್ಲಿ ವ್ಯಾಪಾರಿಯಾಗಿದ್ದಾರೆ. ಮೃತರು ತಾಯಿ ನಾರಾಯಣಿ, ಪತ್ನಿ ಸುಜಾತ, ಮಕ್ಕಳಾದ ರಿತಿಕ್, ರಿತಿಕ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಚೆರುಗೋಳಿ ಹಿಂದೂರುದ್ರ ಭೂಮಿಯಲ್ಲಿ ಅಂತ್ಯಸಂಸ್ಕಾರ ನಡೆಯಿತು. ಮೃತರ ಮನೆಗೆ ಬಿಜೆಪಿ ಮುಂಖಂಡರಾದ ನ್ಯಾಯವಾದಿ ಕೆ.ಶ್ರೀಕಾಂತ್, ವಿಜಯ ಕುಮಾರ್ ರೈ, ಸುಧಾಮ ಗೋಸಾಡ, ಹರೀಶ್ ನಾರಂಪಾಡಿ, ವೀರಪ್ಪ ಅಂಬಾರು, ಪಿ.ಆರ್ ಸುನಿಲ್ ನಾರಂಪಾಡಿ ಹಾಗೂ ವಿಶ್ವಹಿಂದೂ ಪರಿಷತ್, ಬಜರಂಗದಳ ಮುಖಂಡರು, ಕಾರ್ಯಕರ್ತರು, ಹಿತೈಷಿಗಳ ಸಹಿತ ನೂರರು ಮಂದಿ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ. ನಿಧನಕ್ಕೆ ಜನನಿ ಆರ್ಟ್್ಸ ಎಂಡ್ ಸ್ಪೋರ್ಟ್್ಸ ಕ್ಲಬ್ ಅಡ್ಕ ವೀರನಗರ ಸಂತಾಪ ಸೂಚಿಸಿದೆ.