ಮೆಟ್ರೋದಲ್ಲಿ ಕನ್ನಡ ಮಾತನಾಡುವ ವಿಚಾರದಲ್ಲಿ ಇಬ್ಬರು ಮಹಿಳೆಯರ ಮಧ್ಯೆ ವಾಗ್ವಾದ..! ವೀಡಿಯೊ ವೈರಲ್

Share with

ಬೆಂಗಳೂರು: ಕನ್ನಡ ಮಾತನಾಡುವ ವಿಚಾರವಾಗಿ ಎರಡು ಸಮುದಾಯಕ್ಕೆ ಸೇರಿದ ಮಹಿಳೆಯರ ನಡುವೆ ವಾಗ್ವಾದ ನಡೆದಿದ್ದು, ಈ ಸಂಬಂಧ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದೆ.

ನಮ್ಮ ಮೆಟ್ರೊ ನಿಲ್ದಾಣವೊಂದರ ಟಿಕೆಟ್ ಕೌಂಟರ್‌ನಲ್ಲಿ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ಬುರ್ಖಾಧಾರಿ ಮಹಿಳೆಯು ‘ಹಿಂದಿ ಮಾತಾಡ್ರಿ’ ಎಂದು ಹೇಳುವುದನ್ನು ಕೇಳಬಹುದು. ಇದಕ್ಕೆ ಪ್ರತಿಕ್ರಿಯಿಸಿದ ಸೀರೆಯುಟ್ಟ ಮಹಿಳೆಯು, ‘ನೀನೇನು ಮುಖ್ಯಮಂತ್ರಿಯಾ? ಚಲ್ ನಿಕಲ್’ ಎಂದು ಹೇಳುತ್ತಾರೆ.

ಮುಂದುವರಿದು, ‘ಔರತ್ ಹೈ ತು ಸಿದ್ದರಾಮಯ್ಯ ಕಿ?’ (ನೀನು ಸಿದ್ದರಾಮಯ್ಯ ಕಡೆಯವಳೇ?)’ ಎಂದು ಬುರ್ಖಾಧಾರಿ ಮಹಿಳೆ ಕೇಳಿದ್ದಾರೆ. ಇದರಿಂದ ವಾಗ್ವಾದವೂ ಇನ್ನಷ್ಟು ತಾರಕ್ಕೇರಿದೆ.

ಬುರ್ಖಾಧಾರಿ ಮಹಿಳೆಯ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿದೆ. ಭಾಷಾ ವಿವಾದವು ವೈಯಕ್ತಿಕ ನಿಂದನೆಗೆ ದಾರಿ ಮಾಡಿಕೊಡಬಾರದು ಎಂದು ನೆಟ್ಟಿಗರು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *