ಮಂಜೇಶ್ವರ: ರಸ್ತೆ ದಾಟುತ್ತಿದ ವೇಳೆ ಮಿನಿ ಟೆಂಪೋ l ಡಿಕ್ಕಿಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ. ಉದ್ಯಾವರ ನಿವಾಸಿ ಅಬ್ದುಲ್ ಹಮೀದ್ [೫೨] ಎಂಬವರು ಮೃತಪಟ್ಟಿದ್ದಾರೆ. ಬುಧವಾರ ರಾತ್ರಿ ಸುಮಾರು ೮ ಗಂಟೆ ವೇಳೆ ಉದ್ಯಾವರ ಹತ್ತನೇ ಮೈಲು ರಾಷ್ಟಿçÃಯ ಹೆದ್ದಾರಿಯಲ್ಲಿ ರಸ್ತೆ ದಾಟುತ್ತಿದಾಗ ಮಂಗಳೂರು ಭಾಗದಿಂದ ಆಗಮಿಸಿದ ಪಿಕ್ ಅಪ್ ವಾಹನ ಡಿಕ್ಕಿಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡಿದ್ದ ಅಬ್ದುಲ್ ಹಮೀದ್ ಸ್ಥಳದಲೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಮೃತದೇಹವನ್ನು ಮಂಗಲ್ಪಾಡಿ ತಾಲೂಕು ಆಸ್ಪತ್ರೆಯ ಶವಗಾರದಲ್ಲಿರಿಸಲಾಗಿದೆ. ಮಂಜೇಶ್ವರ ಪೋಲೀಸರು ಸ್ಥಳಕ್ಕೆ ತಲುಪು ವಾಹನವನ್ನು ವಶಕ್ಕೆ ತೆಗೆದುಕೊಂಡು ಚಾಲಕನ ವಿರುದ್ದ ಪ್ರಕರಣ ದಾಖಲಿಸಲಾಗಿದೆ. ಮೃತರು ಅವಿವಾಹಿತರಾಗಿದ್ದಾರೆ. ಸಹೋದರ ಸಹೋದರಿಯರಾದ ಅಬ್ದುಲ್ ಕಾದರ್, ನಸೀರ, ಮರಿಯಮ್ಮ, ಕದೀಜ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.