ಉಪ್ಪಳ: ಯಾವುದೇ ಕ್ಷಣದಲ್ಲಿ ವಿದ್ಯುತ್ ಕಂಬವೊoದು ಕುಸಿದು ಬೀಳಲು ಸಿದ್ದಕೊಂಡಿರುವ ವಿದ್ಯುತ್ ಕಂಬದಿoದ ಊರವರು ಆತಂಕಗೊoಡಿದ್ದಾರೆ. ಕೈಕಂಬ-ಬಾಯಾರು ರಸ್ತೆಯ ಜೋಡುಕಲ್ಲು – ಪಂಜಿಪಳ್ಳ ಮಧ್ಯೆ ರಸ್ತೆ ಬದಿಯಲ್ಲಿ ವಾಲಿಕೊಂಡ ವಿದ್ಯುತ್ ಕಂಬ ಭೀತಿ ಸೃಷ್ಟಿಸಿದೆ. ಪ್ರಮುಖ ವಿದ್ಯುತ್ ತಂತಿಗಳು ಹೊಂದಿಕೊಂಡಿರುವ ಈ ವಿದ್ಯುತ್ ಕಂಬ ರಸ್ತೆಗೆ ವಾಲಿಕೊಂಡಿದೆ. ಇದನ್ನು ದುರಸ್ಥಿಗೊಳಿಸಲು ಊರವರು ಹಲವು ಬಾರೀ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಇತ್ತ ಕಡೆ ಗಮನ ಹರಿಸುತ್ತಿಲ್ಲವೆಂದು ಆರೋಪಿಸಲಾಗಿದೆ. ಈ ರಸ್ತೆಯಿಂದ ದಿನನಿತ್ಯ ನೂರಾರು ವಾಹನ ಸಂಚಾರ, ಶಾಲಾ ವಿದ್ಯಾರ್ಥಿಗಳ ಸಹಿತ ಜನನಿಬಿಡ ಪ್ರದೇಶವಾಗಿದ್ದು ಭಯದ ವಾತಾವರಣ ಸೃಷ್ಟಿಯಾಗಿದೆ. ಮಳೆ, ಗಾಳಿಗೆ ಯಾವುದೇ ಕ್ಷಣ ಕುಸಿದು ಬೀಳಲು ಸಿದ್ದಗೊಂಡಿದ್ದು, ಕಂಬ ಬಿದ್ದರೆ ಇತರ ಹಲವಾರು ವಿದ್ಯುತ್ ಕಂಬ ಮುರಿದು ಬಿದ್ದು ಭಾರೀ ಅನಾಹುತ ಸಂಭವಿಸಬಹುದಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕೂಡಲೇ ಕಂಬವನ್ನು ದುರಸ್ಥಿಗೊಳಿಸಿ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ಊರವರು ಒತ್ತಿಸಿದ್ದಾರೆ