ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಹಲವು ದೇಶಗಳಿಗೆ ಪ್ರವಾಸ ಕೈಗೊಂಡಿದ್ದಾರೆ. ಈಗಾಗಲೇ ಟ್ರಿನಿಡಾಡ್ ಮತ್ತು ಟೊಬಾಗೋ, ಪೋರ್ಟ್ ಆಫ್ ಸ್ಪೇನ್, ಘಾನಾಕ್ಕೆ ಪ್ರವಾಸ ಮಾಡಿದ್ದಾರೆ. ಇಂದು (ಜು.5) ಅರ್ಜೆಂಟೀನಾದ ಬ್ಯೂನಸ್ ಐರಿಸ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ದಾರೆ. ಪ್ರಧಾನಿ ಮೋದಿ ಈ ಭೇಟಿ ವೇಳೆ, ಅವರನ್ನು ನೋಡಲು ಅರ್ಜೆಂಟೀನಾದಲ್ಲಿರುವ ಭಾರತೀಯ ವ್ಯಕ್ತಿಯೊಬ್ಬರು 400 ಕಿ.ಮೀ ಪ್ರಯಾಣಿಸಿದ್ದೇನೆ ಎಂದು ಹೇಳಿದ್ದಾರೆ. ನಾನು ಇಷ್ಟು ದೂರ ಬಂದಿದ್ದಕ್ಕೆ ಮೋದಿ ಅವರ ಕೈಕುಲುಕುವ ಅವಕಾಶವೂ ಸಿಕ್ಕಿತು ಎಂದು ಎಎನ್ಐ ಜೊತೆಗೆ ಖುಷಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಿಲೀ ಅವರೊಂದಿಗೆ ಇಂದು ಅನೇಕ ವಿಚಾರಗಳ ಕುರಿತು ಮಾತುಕತೆ ನಡೆಸಲಿದ್ದಾರೆ.
ಅರ್ಜೆಂಟೀನಾದಲ್ಲಿರುವ ಭಾರತೀಯ ಮೂಲದ ವ್ಯಕ್ತಿ ವಿಜಯ್ ಕುಮಾರ್ ಗುಪ್ತಾ ಅವರು ಪ್ರಧಾನಿ ಮೋದಿಯನ್ನು ನೋಡುವ ತವಕದಲ್ಲಿ 400 ಕಿ.ಮೀ ಪ್ರಯಾಣಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ. ನಾನು 400 ಕಿಲೋಮೀಟರ್ ದೂರದಲ್ಲಿರುವ ರೊಸಾರಿಯೋದಿಂದ ಇಲ್ಲಿಗೆ ಬಂದಿದ್ದೇನೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಮಸ್ಕಾರ ಹೇಳಲು ಇಲ್ಲಿಗೆ ಬಂದಿದೆ. ಆದರೆ ನನಗೆ ಅವರ ಕೈಕುಲುಕುವ ಅವಕಾಶ ನನಗೆ ಸಿಕ್ಕಿತು ಎಂದು ಸಂತೋಷದ ಕ್ಷಣವನ್ನು ಹಂಚಿಕೊಂಡಿದ್ದಾರೆ.