ಪೋಸ್ಟ್ ಆಫೀಸ್ ಸ್ಕೀಮ್ನಲ್ಲಿ ತಿಂಗಳಿಗೆ 10,000 ರೂ ಹೂಡಿಕೆಯಿಂದ 7 ಲಕ್ಷ ರೂ ರಿಟರ್ನ್

Share with

ಮ್ಯೂಚುವಲ್ ಫಂಡ್ ಎಸ್ಐಪಿ, ಬ್ಯಾಂಕ್ ಆರ್ಡಿ ರೀತಿ ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್ (Post Office Recurring Deposit scheme) ಕೂಡ ಮಾಸಿಕವಾಗಿ ಹೂಡಿಕೆ ಮಾಡಲು ಅವಕಾಶ ನೀಡುತ್ತದೆ. ರಾಷ್ಟ್ರೀಯ ಉಳಿತಾಯ ಆವರ್ತನ ಠೇವಣಿ ಖಾತೆ ಎಂದು ಅಧಿಕೃತವಾಗಿ ಕರೆಯಲಾಗುವ ಈ ಯೋಜನೆಯು ಕೇಂದ್ರ ಹಣಕಾಸು ಸಚಿವಾಲಯದ ಬೆಂಬಲ ಹೊಂದಿದೆ. ಇಲ್ಲಿ ಹೂಡಿಕೆ ಮಾಡುವ ಹಣಕ್ಕೆ ಸರ್ಕಾರದಿಂದ ಖಾತ್ರಿ ಇರುತ್ತದೆ.

ಅಂಚೆ ಕಚೇರಿಯ ಈ ಆರ್ಡಿ ಪ್ಲಾನ್ 5 ವರ್ಷದ ಅವಧಿಯದ್ದಾಗಿದ್ದು ಶೇ. 6.7ರಷ್ಟು ಬಡ್ಡಿ ಕೊಡುತ್ತದೆ. ಇದರಲ್ಲಿ ಕನಿಷ್ಠ ಹೂಡಿಕೆ 100 ರೂ ಇದ್ದು, ಗರಿಷ್ಠಕ್ಕೆ ಮಿತಿ ಇಲ್ಲ. 5 ವರ್ಷದವರೆಗೂ ಅವಧಿ ಇರುತ್ತದಾದರೂ ಅದಾದ ಮೇಲೆ ಇನ್ನೂ 5 ವರ್ಷ ವಿಸ್ತರಿಸಬಹುದು.

ಇದನ್ನೂ ಓದಿ: ಪಿಎಂ ವಿದ್ಯಾಲಕ್ಷ್ಮೀ ಯೋಜನೆ; ಕಡಿಮೆ ಬಡ್ಡಿದರದಲ್ಲಿ 10 ಲಕ್ಷ ರೂವರೆಗೆ ಸಾಲ; ಇದು ಕೇಂದ್ರ ಪ್ರಾಯೋಜಿತ ಸ್ಕೀಮ್

ಪೋಸ್ಟ್ ಆಫೀಸ್ ಆರ್ಡಿಯಲ್ಲಿ ತಿಂಗಳಿಗೆ 10,000 ರೂ ಹೂಡಿಕೆ ಮಾಡಿದರೆ?
ಪೋಸ್ಟ್ ಆಫೀಸ್ ರೆಕರಿಂಗ್ ಡೆಪಾಸಿಟ್ ಸ್ಕೀಮ್ನಲ್ಲಿ ನೀವು ತಿಂಗಳಿಗೆ 10,000 ರೂನಂತೆ 5 ವರ್ಷದವರೆಗೆ ಹೂಡಿಕೆ ಮಾಡುತ್ತಾ ಹೋದರೆ ಸುಮಾರು 7.11 ಲಕ್ಷ ರೂ ರಿಟರ್ನ್ ಸಿಗುವ ನಿರೀಕ್ಷೆ ಇದೆ.

ಇಲ್ಲಿ ಪ್ರತೀ ಕ್ವಾರ್ಟರ್ಗೆ ಚಕ್ರಬಡ್ಡಿ ಸೇರುತ್ತಾ ಹೋಗುತ್ತದೆ. ಅಂದರೆ, ಮೂರು ತಿಂಗಳಿಗೆ ಹಣ ಕಾಂಪೌಂಡಿಂಗ್ ಆಗುತ್ತಿರುತ್ತದೆ. ಐದು ವರ್ಷದಲ್ಲಿ ನಿಮ್ಮ ಹೂಡಿಕೆಯ 6 ಲಕ್ಷ ರೂ ಹಣಕ್ಕೆ ಒಂದು ಲಕ್ಷ ರೂಗೂ ಅಧಿಕ ಬಡ್ಡಿ ಹಣ ಜಮೆಯಾದಂತಾಗುತ್ತದೆ.

ಐದು ವರ್ಷದಲ್ಲಿ 10 ಲಕ್ಷ ರೂ ಗಳಿಸಲು ಎಷ್ಟು ಹೂಡಿಕೆ ಬೇಕು?
ನೀವು ಮಾಸಿಕ ಹೂಡಿಕೆಯಿಂದ ಐದು ವರ್ಷದಲ್ಲಿ 10 ಲಕ್ಷ ರೂ ರಿಟರ್ನ್ ಪಡೆಯುವ ಗುರಿ ಹೊಂದಿದ್ದರೆ ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ ತಿಂಗಳಿಗೆ ಸುಮಾರು 14,500 ರೂ ಹೂಡಿಕೆ ಮಾಡಬೇಕಾಗಬಹುದು.

ಪೋಸ್ಟ್ ಆಫೀಸ್ ಸ್ಕೀಮ್ಗಳ ಪ್ರಮುಖ ತೊಡಕು ಎಂದರೆ ಇಲ್ಲಿ ಬ್ಯಾಂಕ್ ಆರ್ಡಿಯಲ್ಲಿರುವಂತೆ ಆನ್ಲೈನ್ ಪೇಮೆಂಟ್ ವ್ಯವಸ್ಥೆ ಇರುವುದಿಲ್ಲ. ಖುದ್ದಾಗಿ ಅಂಚೆ ಕಚೇರಿಗೆ ಹೋಗಿ ಹಣ ಪಾವತಿಸಬೇಕಾಗುತ್ತದೆ.


Share with

Leave a Reply

Your email address will not be published. Required fields are marked *