ಕಾಸರಗೋಡು: ಕುಂಬಳೆ ಕಣ್ಣೂರು ಅನಂತಪುರ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಫೆ. 27ರಂದು ಜರಗಲಿದ್ದು ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಲಿದೆ.
ಬೆಳಿಗ್ಗೆ 8 ಗಂಟೆಗೆ ಗಣಪತಿ ಹವನ, ವೇದ ಪಾರಾಯಣ, ಬಿಂಬ ಶುಧ್ಧಿ,ಪಂಚವಿಂತಿ ಕಲಶಾಭಿಷೇಕ, 8:30ಕ್ಕೆ ಪಯನೂರು ಕೆವಿ ರಾಜನ್ ಮರಾರ್ ರವರಿಂದ ಸೋಪಾನ ಸಂಗೀತ, ಭಜನೆ, ಬೆಳಿಗ್ಗೆ 10 ಗಂಟೆಗೆ ಅನಂತಪುರ ಪ್ರಕೃತಿ ಯುವ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ , 10.30ರಿಂದ ತುಲಾಭಾರ ಸೇವೆ, 12:30ಕ್ಕೆ ಮಹಾಪೂಜೆ ನಡೆದು ಪ್ರಸಾದ ವಿತರಣೆ, ಅನ್ನಸಂತರ್ಪಣೆ ಆಗಲಿದೆ. ಸಂಜೆ 7:00 ಗಂಟೆಗೆ ಪ್ರಕೃತಿ ಯುವ ತಂಡ ಅನಂತಪುರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ಬಾಲಗೋಕುಲ ಹಾಗು ಊರ ಮಕ್ಕಳಿಂದ ನೃತ್ಯ ಕಾರ್ಯಕ್ರಮ ನಡೆದು, ರಾತ್ರಿ 7 ಗಂಟೆಗೆ ಪೂಜೆ, ರಾತ್ರಿ 7.30 ಕ್ಕೆ ಭೂತ ಬಲಿ, ಬಡಿಕಟ್ಟೆ ಪೂಜೆ, ರಾತ್ರಿ 8 ಗಂಟೆಗೆ ಮಧುರೈ ಮೀನಾಕ್ಷಿ ಬ್ರಹ್ಮಾಂಡ ನೃತ್ಯ ನಾಟಕ ಜರಗಲಿದೆ.
ರಾತ್ರಿ 10 ಗಂಟೆಗೆ ರಾಜಾಂಗಣ ಪ್ರಸಾದ ಮಂತ್ರಾಕ್ಷತೆ ನೆರವೇರಲಿದೆ. ಫೆ.28ರಂದು ಸಂಪ್ರೋಕ್ಷಣೆ ನೆರವೇರಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.