ಕಾಸರಗೋಡು: ಇಲ್ಲಿನ ಕೂಡ್ಲು ಸಿಪಿಸಿಆರ್‌ಐ ಬಳಿ ಇರುವ ಕಾವುಗೋಳಿ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಹಾಗೂ ಶ್ರೀ ವಿಷ್ಣುಮೂರ್ತಿ ದೈವದ ಕೋಲ ಫೆ.9 ಮತ್ತು 10 ರಂದು ಕ್ಷೇತ್ರದ ತಂತ್ರಿ ಬ್ರಹ್ಮ ಶ್ರೀ ಉಳಿತ್ತಾಯ ವಿಷ್ಣು ಅಸ್ರರವರ ನೇತೃತ್ವದಲ್ಲಿ ಜರಗಿತು.
ಫೆ.09 ರಂದು ಬೆಳಿಗ್ಗೆ ಗಣಪತಿ ಹೋಮ, ಉಷ ಪೂಜೆ, ಕಲಶ ಪೂಜೆ, ಲಕ್ಷಾರ್ಚನೆ, ಗಂಟೆಗೆ ನವಕಾಭಿಷೇಕ ನಡೆದು ಬಳಿಕ ನೀರ್ಚಾಲ್ ಚೌಕಿ ಕೃಷ್ಣನ್ ಖತ್ತರ್ ರವರ ಪ್ರಾಯೋಜಕತ್ವದಲ್ಲಿ ಹರಿನಾಮ ಸಂಕೀರ್ತನೆ ಹಾಗೂ ಕಡಪ್ಪುರ ಕಾವುಗೋಳಿ ಮಹಾವಿಷ್ಣು ಮಹಿಳಾ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ಜರಗಿತು.
ತುಲಾಭಾರ ಸೇವೆಯ ಬಳಿಕ ಮಹಾಪೂಜೆ ನಡೆದು ಅನ್ನಪ್ರಸಾದ ನೆರವೇರಿತು.
ಸಂಜೆ ರಾಜನ್ ಮಾರಾರ್ ಸಂಘ ಇವರಿಂದ ತಾಯಂಬಕ, ದೀಪಾರಾಧನೆ ನಡೆದು ಬಳಿಕ ಮಹಾವಿಷ್ಣು ಭಜನಾ ಸೇವಾ ಸಂಘ ಕಡಪ್ಪುರ ಕಾವುಗೋಳಿ ಇವರಿಂದ ಭಜನೆ ಜರಗಿತು.
ಸಂಜೆ ʼನರಕಾಸುರ ಮೋಕ್ಷʼ ಯಕ್ಷಗಾನ ಬಯಲಾಟದ ಬಳಿಕ ಉತ್ಸವ ಬಲಿ, ಸಿಡಿಮದ್ದು ಪ್ರಯೋಗ, ದರ್ಶನ ಬಲಿ, ರಾಜಾಂಗಣ ಪ್ರಸಾದ ನೆರವೇರಿತು.
ರಾತ್ರಿ 11ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಭಂಡಾರ ಆಗಮನ, ಬಳಿಕ ವಿಷ್ಣುಮೂರ್ತಿ ದೈವದ ತೊಡಂಙಲ್ ನಡೆಯಿತು.
ಫೆ.10ರಂದು ಬೆಳಿಗ್ಗೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ ನಡೆದು ಬಳಿಕ ಪ್ರಸಾದ ವಿತರಣೆ ನಡೆಯಿತು.
ಮಧ್ಯಾಹ್ನ ಮಹಾಪೂಜೆ ನಡೆದು ಮಧ್ಯಾಹ್ನ ಅನ್ನಪ್ರಸಾದ ನೆರವೇರಿತು. ಈ ಸಂದರ್ಭದಲ್ಲಿ ಆಡಳಿತ ಸಮಿತಿ, ಊರ ಮುಖಂಡರು ಹಾಗೂ ನೂರಾರು ಭಕ್ತಾಧಿಗಳು ಪಾಲ್ಗೊಂಡಿದ್ದರು.