ಉಪ್ಪಳ: ಸೇವಾಭಾರತಿ ಕಲಾವೃಂದ ಹಾಗೂ ಭಜನಾ ಮಂದಿರ ಬೇಕೂರು ಇದರ ವಾರ್ಷಿಕ ಮಹಾಸಭೆ ಹಾಗೂ ಬಡ ವಿದ್ಯಾರ್ಥಿಗಳಿಗೆ, ಅನಾರೋಗ್ಯ ಪೀಡಿತರಿಗೆ ಸಂಘದ ವತಿಯಿಂದ ಧನ ಸಹಾಯ ವಿತರಣಾ ಕಾರ್ಯಕ್ರಮ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರ ಸಾನಿದ್ಯದಲ್ಲಿ ನಡೆಯಿತು. ಶ್ರೀಗಳು ಆಶೀರ್ವಚನದಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕವಾಗಿ ಕಾರ್ಯಗಳನ್ನು ಕೈಗೊಳ್ಳುತ್ತಾನಿರಂತರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಸೇವಾಭಾರತಿ ಕಲಾವೃಂದದ ಕಾರ್ಯ ಶ್ಲಾಂಘನೀಯ. ಸಂಘದ ಚಟುವಟಿಕೆಗಳು ಇನ್ನಷ್ಟು ಜನರ ಬಾಳಿಗೆ ಬೆಳಕಾಗಲಿ ಎಂದರು. ಈ ಸಂದರ್ಭದಲ್ಲಿ ಮರದ ಕೆಲಸವನ್ನು ಮಾಡಿದ ರಾಮಣ್ಣ ಆಚಾರ್ಯ ಬೇಕೂರು, ಕಟ್ಟಡ ನಿರ್ಮಾಣ ಮಾಡಿದ ಹರೀಶ್ ಮೇಸ್ತ್ರಿ ಅಟ್ಟೆಗೋಳಿ, ರಾಜೇಶ್ ಕೋಡಿಬೈಲು ಹಾಗೂ ಗೌರವ ಸಲಹೆಗಾರರಾದ ನಾರಾಯಣ ಕಾನ ಇವರನ್ನು ಸನ್ಮಾನಿಸಲಾಯಿತು. ಗೌರವಾಧ್ಯಕ್ಷ ಕುಂಞಂರಾಮ ಕಾನ, ನಟೇಶ ಬಳ್ಳುಕ್ಕುರಾಯ, ಬೇಕೂರು ವಿಷ್ಣುಮೂರ್ತಿ ದೈವಸ್ಥಾನದ ಮುಖ್ಯಸ್ಥ ಅಪುö್ಪ ಬೆಳ್ಚಪ್ಪಾಡ, ಹಿರಣ್ಯ ಯುವಕ ವೃಂದದ ಅಧ್ಯಕ್ಷ ಗಂಗಾಧರ ಶೆಟ್ಟಿ ಬೊಳುವಾಯಿ, ಮಾತೃ ವಿಭಾಗದ ಉಪಾಧ್ಯಕ್ಷೆ ಶ್ರೀಜಾ, ಸಂಚಾಲಕಿ ಪ್ರತಿಮ ಬೇಕೂರು ಉಪಸ್ಥಿತರಿದ್ದರು. ಗಾನಶ್ರೀ ಬೇಕೂರು ಪ್ರಾರ್ಥನೆ ಹಾಡಿದರು. ಕಾರ್ಯದರ್ಶಿ ಮಾಧವ ಆಚಾರ್ಯ ಸ್ವಾಗತಿಸಿದರು. ಸಂಘದ ಅಧ್ಯಕ್ಷ ರಾಜೇಶ್ ಅಗರ್ತಿಮೂಲೆ ಪ್ರಾಸ್ತಾವಿಕ ಭಾಷಣಗೈದರು. ಕೋಶಾಧಿಕಾರಿ ವಿನೋದ್ ಬೇಕೂರು ವಂದಿಸಿದರು.