
ಶ್ರೀ ಚೀರುಂಬಾ ಭಗವತೀ ಕ್ಷೇತ್ರ ಚೆರುಗೋಳಿ, ಮಂಗಲ್ಪಾಡಿ ಇದರ ವಾರ್ಷಿಕ ಮಹಾಸಭೆಯು ನ.3 ರಂದು ಕ್ಷೇತ್ರದಲ್ಲಿ ಜರಗಿತು. ಕ್ಷೇತ್ರ ಆಡಳಿತ ಸಮಿತಿಯ ಅಧ್ಯಕ್ಷ ಕೆ. ಪಿ. ನಾರಾಯಣ ಪಟ್ಲ ರವರು ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.ಕ್ಷೇತ್ರದ ಅಚ್ಚಮ್ಮಾರರಾದ ಬಟ್ಯ ಮೂತೆ ಚೆಟ್ಟಿಯಾರ್, ಉದಯ ಕಾರ್ನವರ್, ಗಂಗಾಧರ ಮಡೆಯರು ಹಾಗೂ ಆಡಳಿತ ಸಮಿತಿಯ ಗೌರವಾಧ್ಯಕ್ಷರಾದ ರಾಮಚಂದ್ರ C, ಹಿರಿಯ ಸದಸ್ಯರಾದ ಶಶಿಧರ ಕೂಡ್ಲು (Retd. I A S),ನಡಾವಳಿ ಉತ್ಸವ ಸಮಿತಿಯ ಅಧ್ಯಕ್ಷರಾದ ಪುರುಷೋತ್ತಮ ಐಲ ಸಭೆಯಲ್ಲಿ ಉಪಸ್ಥಿತರಿದ್ದರು. ಕೋಶಾಧಿಕಾರಿಯವರಾದ ಗೋಪಾಲ D. ಜೋಡುಕಲ್ಲು ರವರು ವಾರ್ಷಿಕ ಲೆಕ್ಕ ಪತ್ರ ಮಂಡನೆ ಮಾಡಿದರು. ಸುನೀತ ದಿನೇಶ್ ಐಲ ರವರು ಮಹಿಳಾ ಸಮಿತಿಯ ಹಾಗೂ ಚಂದ್ರಹಾಸ ಐಲ ರವರು ಸತ್ಯನಾರಾಯಣ ಭಜನಾ ಸಂಘದ ವಾರ್ಷಿಕ ಲೆಕ್ಕ ಪತ್ರ ಮಂಡಿಸಿದರು.ಈ ಸಂದರ್ಭದಲ್ಲಿ 2025 ರ ಏಪ್ರಿಲ್ ತಿಂಗಳಲ್ಲಿ ಕ್ಷೇತ್ರದಲ್ಲಿ ನಡೆಯಲಿರುವ ನಡಾವಳಿ ಉತ್ಸವದ ಆಮಂತ್ರಣ ಪತ್ರಿಕೆಯ ಬಿಡುಗಡೆ ಕಾರ್ಯಕ್ರಮವನ್ನು ಹಿರಿಯ ಸದಸ್ಯರಾದ ಶಶಿಧರ್ I A S ಕೂಡ್ಲು ರವರು ನೆರವೇರಿಸಿದರು.ಕ್ಷೇತ್ರ ಸಮಿತಿಯ ಉಪಾಧ್ಯಕ್ಷರಾದ ಪಾಂಡುರಂಗ U ರವರು ಕ್ಷೇತ್ರದ ಅಭಿವೃದ್ಧಿ ಹಾಗೂ ಕ್ಷೇತ್ರದಲ್ಲಿ ನಿರ್ಮಾಣಗೊಳ್ಳುತ್ತಿರುವ ಭೋಜನ ಶಾಲೆಯ ಬಗ್ಗೆ ಮಾಹಿತಿ ನೀಡಿದರು . ದಿನೇಶ್ ಐಲ ರವರು ಕಾರ್ಯಕ್ರಮ ನಿರೂಪಿಸಿದರು, ಕ್ಷೇತ್ರ ಆಡಳಿತ ಸಮಿತಿಯ ಪ್ರಧಾನ ಕಾರ್ಯದರ್ಶಿಯವರಾದ ತುಳಸೀದಾಸ್ ಅಮ್ಮೆನಡ್ಕ ರವರು ವಂದಿಸಿದರು.






