ಬಂಟ್ವಾಳ: ತಾಲೂಕಿನ ಕಟ್ಟೆಮಾರ್ ಮಂತ್ರದೇವತಾ ಸಾನಿಧ್ಯದಲ್ಲಿ ದೊಂಧಿ ಬೆಳಕಿನಲ್ಲಿ ವಾರ್ಷಿಕ ಕೋಲೋತ್ಸವವು ಪೆಬ್ರವರಿ 10 ರಂದು ನಡೆಯಲಿದೆ.
ಬೆಳಿಗ್ಗೆ ಗಣಹೋಮ ನಡೆಯಲಿದ್ದು, ನಂತರ ಶ್ರೀ ಕೃಷ್ಣ ಭಜನಾ ಮಂದಿರ ಅಮ್ಟೂರ್, ರಾಮಕೃಷ್ಣ ಬಾಲಗೋಕುಲ ಮಲ್ಲೂರು ಮತ್ತು ಶ್ರೀ ನಾಗಬ್ರಹ್ಮ ಸುಬ್ರಹ್ಮಣ್ಯ ಭಜನಾ ಮಂಡಳಿ ಬದನಡಿ ಕೊಯಿಲ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ, ನಂತರ ಶ್ರೀ ಸತ್ಯನಾರಾಯಣ ಪೂಜೆ ಹಾಗೂ ಪ್ರಸಾದ ವಿತರಣೆ ಜರಗಲಿದ್ದು, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಲಿದೆ.
ಸಾಯಂಕಾಲ ಗಂಟೆ 4 ರಿಂದ ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೇಶಿವಾಲಯ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ನಂತರ ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಹನುಮಾನ್ ಫ್ರೆಂಡ್ಸ್ ಅಮ್ಟೂರ್ ಪ್ರಾಯೋಜಕತ್ವದಲ್ಲಿ “ಯಕ್ಷಗಾನ ಹಾಸ್ಯ ವೈಭವ ” ಜರಗಲಿದ್ದು, ಪ್ರಸಿದ್ಧ ಯಕ್ಷಗಾನ ಹಾಡುಗಾರರಾದ ಪಟ್ಲ ಸತೀಶ್ ಶೆಟ್ಟಿ, ರವಿಚಂದ್ರ ಕನ್ನಡಿಕಟ್ಟೆ, ಶ್ರೀಮತಿ ಅಮೃತ ಅಡಿಗರವರ ಹಾಡುಗಾರಿಕೆ, ಪ್ರಸಿದ್ಧ ಹಾಸ್ಯ ಕಲಾವಿದರಾದ ದಿನೇಶ್ ಕೋಡಪದವು, ದಿನೇಶ್ ರೈ ಕಡಬ, ರಕ್ಷಿತ್ ಶೆಟ್ಟಿ ಪಡ್ರೆ, ಲೋಕೇಶ್ ಮಚ್ಚೂರು, ಪ್ರಜ್ವಲ್ ಕುಮಾರ್ ಗುರುವಾಯನಕೆರೆ ರವರ ಹಾಸ್ಯಗಾರಿಕೆ ನಡೆಯಲಿರುವುದು.
ಬಳಿಕ ಮೋಹನ್ ರಾಜ್ ಚೌಟ ಪುಂಚೋಳಿಮಾರು ಗುತ್ತುರವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಮುಖ್ಯ ಅತಿಥಿಗಳಾಗಿ, ಮಂಗಳೂರು ಸಂಸದರಾದ ನಳಿನ್ ಕುಮಾರ್ ಕಟೀಲ್, ಬಂಟ್ವಾಳ ಶಾಸಕ ರಾಜೇಶ್ ನಾಯಕ್, ಹೆಬ್ಬೆವ್ ಫಾರ್ಮ್ಸ್ ಪೆನ್ ಕೊಡ ತೆಲಂಗಾಣದ ಅಶ್ರೀತ್ ಕಿಶನ್, ರೈತ ಸಂಘ ಬೆಂಗಳೂರಿನ ಸಂಚಾಲಕರಾದ ಕೆ ಎಲ್ ಗೋಪಾಲಕೃಷ್ಣ, ನಟೇಶ್ ಪೂಜಾರಿ ಉದ್ಯಮಿ ಬೆಂಗಳೂರು, ಹರೀಶ್ ಶೆಟ್ಟಿ ಉದ್ಯಮಿ ಮುಂಬೈ, ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ, ಅಶೋಕ್ ಕರ್ಕೇರ ಉದ್ಯಮಿ ಬೊಂಬಾಯಿ, ಪ್ರವೀಣ್ ಕರ್ಕೇರ, ವಿಜಯಕುಮಾರ್ ಕೊಡಿಯಾಲ್ ಬೈಲ್, ವಿದ್ಯಾಧರ ಪೂಜಾರಿ ಕಡೇಶಿವಾಲಯ, ವಸಂತ ಪೂಜಾರಿ, ತಾರಾನಾಥ ಸಾಲಿಯನ್ ಮೊದಲಾದವರು ಉಪಸ್ಥಿತರಿರುವರು.
ಧಾರ್ಮಿಕ ಸಭಾ ಕಾರ್ಯಕ್ರಮದ balikr ಶ್ರೀಮಂತ್ರದೇವತೆಗೆ ದೊಂದಿ ಬೆಳಕಿನಲ್ಲಿ ವೈಭವದ ಕೋಲೋತ್ಸವ ಜರಗಲಿರುವುದು.
ಮರುದಿನ ಅಂದರೆ ಫೆಬ್ರವರಿ 11 ರಂದು ಬೆಳಿಗ್ಗೆ ಶ್ರೀ ಕೃಷ್ಣ ಭಜನ ಮಂದಿರ ಅಮ್ಟೂರ್, ಪಾಂಚಜನ್ಯ ಹರಿ ಕೀರ್ತನ ಸಂಕೀರ್ತನೆ ಬಂಟ್ವಾಳ, ಶ್ರೀ ಉಳ್ಳಾತಿ ಬಾಲ ಭಜನಾ ಮಂಡಳಿ ಬೊಂಡಲ ಮತ್ತು ಶ್ರೀ ದುರ್ಗಾ ಮಹಿಳಾ ಭಜನಾ ಮಂಡಳಿ ಕೊಡಿಕಲ್ ಇವರಿಂದ ಭಜನಾ ಸಂಕೀರ್ತನ ಕಾರ್ಯಕ್ರಮ ನಡೆಯಲಿದ್ದು, ಶ್ರೀ ಶಾರದಾ ಅಂದರ ಗೀತಾ ಗಾಯನ ಸಂಘ ಶೃಂಗೇರಿ ಇವರಿಂದ ಭಕ್ತಿ ಗಾಯನ ಜರಗಲಿದೆ.
ಬಳಿಕ ಸ್ವಾಮಿ ಕೊರಗಜ್ಜ ಹಾಗೂ ಶ್ರೀ ಗುಳಿಗ ದೈವದ ಕೋಲೊತ್ಸವ ಜರಗಲಿರುವುದು. ಈ ಎಲ್ಲಾ ಕಾರ್ಯಕ್ರಮದಲ್ಲಿ ತಾವೆಲ್ಲರೂ ಭಾಗವಹಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿ ದೈವದ ಕೃಪೆಗೆ ಪಾತ್ರರಾಗಬೇಕೆಂದು ಕಟ್ಟೆಮಾರ್ ಕ್ಷೇತ್ರದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮಾರ್ ಅವರು ವಿನಂತಿಸಿರುತ್ತಾರೆ.