ಉಪ್ಪಳ: ಅಂಬಾರು ಶ್ರೀ ಸದಾಶಿವ ದೇವಸ್ಥಾನದಲ್ಲಿ ವರ್ಷಾವಧಿ ಕ್ಷೇತ್ರೋತ್ಸವ ಜ.22ರಿಂದ 30ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಪ್ರಮುಖ ಕಾರ್ಯಕ್ರಮಗಳು: 22ರಂದು ಸಂಜೆ ಚೆರುಗೋಳಿ ಬೆಡಿಕಟ್ಟೆ ಬಳಿಯಿಂದ ಹೊರೆಕಾಣಿಕೆ ಮೆರವಣಿಗೆ, 7ಕ್ಕೆ ಕ್ಷೇತ್ರ ತಂತ್ರಿಯವರು, ಪ್ರಧಾನ ಅರ್ಚಕರು ಮತ್ತು ಊರ ಹತ್ತು ಸಮಸ್ತರು ಸೇರಿಕೊಂಡು ಸಾಮೂಹಿಕ ಪ್ರಾರ್ಥನೆ, ರಾತ್ರಿ 8ಕ್ಕೆ ದುರ್ಗಾನಮಸ್ಕಾರ ಪೂಜೆ, ನಿತ್ಯಪೂಜೆ, ಪ್ರಸಾದ ವಿತರಣೆ ನಡೆಯಲಿದೆ.
23ರಂದು ಬೆಳಿಗ್ಗೆ 8ರಿಂದ 108 ಕಾಯಿ ಗಣಯಾಗ, ಅಂಕುರಪೂಜೆ, ರುದ್ರಾಭಿಷೇಕ, ನವಕ ಕಲಶಾಭಿಷೇಕ, ರಾತ್ರಿ 8.30ಕ್ಕೆ ಬಯ್ಯನ ಬಲಿ ಹೊರಡುವುದು ನಡೆಯಲಿದೆ.
27ರಂದು ರಾತ್ರಿ 8.30ಕ್ಕೆ ಬಯ್ಯನ ಬಲಿ, ನಡು ದೀಪೋತ್ಸವ, ರಾಜಾಂಗಣ ಪ್ರಸಾದ ಮತ್ತು ಸೇವೆಗಳು ನಡೆಯಲಿದೆ.
28ರಂದು ರಾತ್ರಿ 8.30ರಿಂದ ಬಯ್ಯನ ಬಲಿ, ರಾಜಾಂಗಣ ಪ್ರಸಾದ, ಗ್ರಾಮಬಲಿ, ಬೆಡಿ ಉತ್ಸವ, ಶ್ರೀ ಭೂತಬಲಿ, ಶಯನ ಕವಾಟ ಬಂಧನ ನಡೆಯಲಿದೆ.
29ರಂದು ಬೆಳಿಗ್ಗೆ 6.29ಕ್ಕೆ ಕವಾಟೋದ್ಘಾಟನೆ, ಸಿಯಾಳಾಭಿಷೇಕ, ಮಹಾಪೂಜೆ, ಬೆಳಿಗ್ಗೆ 11ರಿಂದ 12ರ ತನಕ ಜಯಲಕ್ಷ್ಮಿ ಕಾರಂತ ಮತ್ತು ದಿವ್ಯ ಕಾರಂತ ಮಂಗಲ್ಪಾಡಿ ಇವರಿಂದ ಗಮಕ, ವಾಚನ, ವ್ಯಾಖ್ಯಾನ, ಮಧ್ಯಾಹ್ನ 12ಕ್ಕೆ ತುಲಾಭಾರ ಸೇವೆ, ರಾತ್ರಿ 8.30ಕ್ಕೆ ಬಯ್ಯನ ಬಲಿ, ರಾಜಾಂಗಣ ಪ್ರಸಾದ, ಅವಭೃತಸ್ನಾನ ನಡೆಯಲಿದೆ.
30ರಂದು ಬೆಳಿಗ್ಗೆ 8ಕ್ಕೆ ಶ್ರೀ ದೇವರಿಗೆ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಸಂಪ್ರೋಕ್ಷಣೆ, ಪ್ರಸಾದ ವಿತರಣೆ, ದೈವಗಳ ಭಂಡಾರ ಏರುವುದು, ಸಂಜೆ 4.30ರಿಂದ ಪರಿವಾರ ದೈವಗಳಾದ ಗುಳಿಗನಿಗೆ ಕೋಲ, 5.30ರಿಂದ ರಕ್ತೇಶ್ವರಿ ನೇಮ, ರಾತ್ರಿ 8ಕ್ಕೆ ಭಂಡಾರ ಇಳಿಯುವುದು, ಪೂಜೆ, ಸಂತರ್ಪಣೆ ನಡೆಯಲಿದೆ.
ಉತ್ಸವದ ಸಂದರ್ಭದಲ್ಲಿ ಪ್ರತಿದಿನ ಬೆಳಿಗ್ಗೆ 7.30ಕ್ಕೆ ನಿತ್ಯಪೂಜೆ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ರಾತ್ರಿ ಬಯ್ಯನ ಬಲಿ, ಶ್ರೀಭೂತಬಲಿ, ರಂಗಪೂಜೆ ಸಹಿತ ವಿವಿಧ ಸೇವೆಗಳು ನಡೆಯಲಿದೆ.