ಉಪ್ಪಳ: ಮಂಗಲ್ಪಾಡಿ ಪುಳಿಕುತ್ತಿ ಐಲ ಬ್ರಹ್ಮಶ್ರೀ ಮೊಗೇರ ಮಹಾಕಾಳಿ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಮಾ.27ರಿಂದ 29ರ ತನಕ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಮಾ.27ರಂದು ಮುಂಜಾನೆ ಗಣಹೋಮ ನಡೆಯಿತು.
ಮಧ್ಯಾಹ್ನ 1.30ರಿಂದ ಭಂಡಾರ ಮನೆಯಲ್ಲಿ ಶ್ರೀ ಗುಳಿಗ ದೈವದ ಕೋಲ, ಸಂಜೆ 4ರಿಂದ ಶ್ರೀ ಕೊರತಿ ದೈವದ ಕೋಲ, ಸಂಜೆ 6ರಿಂದ 6.45ರ ತನಕ ನವದುರ್ಗಾ ಕುಣೀತಾ ಭಜನಾ ಸಂಘ ಪುಳಿಕುತ್ತಿ ಇವರಿಂದ ಕುಣಿತ ಭಜನೆ, ಸಂಜೆ 7ಕ್ಕೆ ಶ್ರೀ ದೈವಗಳ ಭಂಡಾರ ಆಗಮನ, ರಾತ್ರಿ 7.30ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಮುಂದಾಳು ಎಂ.ಕೆ ಅಶೋಕ್ ಕುಮಾರ್ ಹೊಳ್ಳ ಅಧ್ಯಕ್ಷತೆ ವಹಿಸುವರು. ಮಂಗಲ್ಪಾಡಿ ಪಂಚಾಯತ್ ಮಾಜಿ ಸದಸ್ಯೆ ಜಯಲಕ್ಷ್ಮಿ ಮಯ್ಯ ತಿಂಬರ, ಹಿರಿಯ ಕೃಷಿಕ ದಾಮೋದರ ಉಬರ್ಳೆ, ವಾರ್ಡ್ ಸದಸ್ಯೆ ಸುಧಾ ಗಣೇಶ್ ಉಪಸ್ಥಿತರಿರುವರು.
ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ರಾತ್ರಿ 8.30ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ, ರಾತ್ರಿ 9ರಿಂದ ಅನ್ನಸಂತರ್ಪಣೆ, 9.30ರಿಂದ ಶ್ರೀ ಕೊರಗ ತನಿಯ, ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ ದೈವಗಳ ನೇಮೋತ್ಸವ, 28ರಂದು ಸಂಜೆ 6ರಿಂದ 6.45ರ ತನಕ ಶ್ರೀ ಅಯ್ಯಪ್ಪ ಮಕ್ಕಳ ಕುಣಿತ ಭಜನಾ ಸಂಘ ಬಾಯಿಕಟ್ಟೆ ಇವರಿಂದ ಕುಣಿತ ಭಜನೆ, ರಾತ್ರಿ ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ ಕಾರ್ಯಕ್ರಮ, ಅನ್ನಸಂತರ್ಪಣೆ, ರಾತ್ರಿ 11ರಿಂದ ಶ್ರೀ ಮಹಾಕಾಳಿ ದೈವದ ನೇಮೋತ್ಸವ, ಸಿರಿಮುಡಿ ಗಂಧ ಪ್ರಸಾದ ವಿತರಣೆ, 29ರಂದು ರಾತ್ರಿ 8.30ರಿಂದ ಸ್ಥಳೀಯ ಮಕ್ಕಳಿಂದ ನೃತ್ಯ, ಅನ್ನಸಂತರ್ಪಣೆ, ರಾತ್ರಿ 10.30ರಿಂದ ಐಲ ಬ್ರಹ್ಮಶ್ರೀ ಮೊಗೇರ ದೈವಗಳ ನೇಮೋತ್ಸವ, 12ರಿಂದ ಶ್ರೀ ತನ್ನಿಮಾನಿಗ ದೈವವು ವಾದ್ಯ ಘೋಷಗಳೊಂದಿಗೆ ಭಂಡಾರ ಮನೆಯಿಂದ ಹೊರಟು ಉತ್ಸವಾಂಗಣಕ್ಕೆ ಪ್ರವೇಶ, 30ರಂದು ಬೆಳಿಗ್ಗೆ 5ಕ್ಕೆ ಶ್ರೀ ದೈವಗಳಲ್ಲಿ ಭಕ್ತಾಧಿಗಳ ಹರಕೆ ಸಮರ್ಪಿಸಿ ಸಿರಿಮುಡಿ ಗಂಧ ಪ್ರಸಾದ ಸ್ವೀಕಾರ ಬಳಿಕ ಭಂಡಾರ ಇಳಿಯುವುದು.