ಅಯೋಧ್ಯೆ: ಅಯೋಧ್ಯೆಯಲ್ಲಿ ಶಾಂತಿ ಭಂಗ & ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಬಗ್ಗೆ ಮಾಹಿತಿ ಪಡೆದ ನಂತರ ಸ್ಥಳೀಯ ಆಡಳಿತವು ವಾರ್ಷಿಕ ಉರುಸ್ ಸಮಾರಂಭವನ್ನು ನಿಷೇಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ 2 ದಶಕಗಳಿಂದ ಅಯೋಧ್ಯೆಯಲ್ಲಿ ನಡೆಯುತ್ತಿರುವ ಉರುಸ್ ಸಮಾರಂಭವನ್ನು ಶನಿವಾರ & ಭಾನುವಾರ ನಿಗದಿಪಡಿಸಲಾಗಿತ್ತು. ಆದರೆ ವಿಶ್ವ ಹಿಂದೂ ಪರಿಷತ್ ದೂರಿನ ನಂತರ, ಅಯೋಧ್ಯಾ ಆಡಳಿತವು, ಖಾನ್‌ಪುರ ಮಸೋಧಾ ಪ್ರದೇಶದಲ್ಲಿ ಪ್ರತಿ ವರ್ಷ ನಡೆಯುವ ದಾದಾ ಮಿಯಾ ಉರುಸ್’ಗೆ ಅನುಮತಿ ನಿರಾಕರಿಸಿದೆ.




