ಮಂಗಳೂರು: ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆ ಕಣಿಯ ಮನೆಯೊಂದರಲ್ಲಿ ಸೋಮವಾರ ರಾತ್ರಿ ಕಳವು ನಡೆದಿದೆ.
ಮನೆಮಂದಿ ಮಲಗಿದ್ದಾಗ ಕಿಟಕಿ ಮುರಿದು ಚಿನ್ನಾಭರಣ ಕಳವು ಮಾಡಲಾಗಿದೆ. ಅಲ್ಲದೆ ಕಳ್ಳರು ಕಾರನ್ನು ಕೂಡ ಕಳವು ಮಾಡಿದ್ದಾರೆಂದು ತಿಳಿದುಬಂದಿದೆ.
ಕಳೆದ ಶನಿವಾರ ನಗರದ ಕೋಡಿಕಲ್ ಬಳಿ ಕಳ್ಳತನ ನಡೆದಿತ್ತು. ಚಡ್ಡಿಗ್ಯಾಂಗ್ ಆ ಕೃತ್ಯ ನಡೆಸಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು.ಅದೇ ತಂಡ ಕೋಟೆಕಣಿಯಲ್ಲಿಯೂ ಕೃತ್ಯ ಎಸಗಿದೆ ಎಂದು ಅಂದಾಜಿಸಲಾಗಿದೆ.