ಚಂದ್ರಯಾನ-3 ಮಿಷನ್‌ಗೆ ಸಂಬಂಧಿಸಿದಂತೆ ವಿಜ್ಞಾನಿಗಳು ಸತತ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದಾರೆ. ಇಸ್ರೋ ವಿಜ್ಞಾನಿಗಳು ಚಂದ್ರನ ಕಕ್ಷೆಯ ಬಳಿ ಇಂಧನವನ್ನು ಸುಡುವ ಮೂಲಕ ಮತ್ತೊಂದು ಕಾರ್ಯಾಚರಣೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಸೋಮನಾಥ್ ತಿಳಿಸಿದ್ದಾರೆ.
ಆಗಸ್ಟ್ 14ರಂದು ಮತ್ತೊಂದು ಹಂತದ ಆಪರೇಷನ್ ಮಾಡಲಾಗುವುದು ಎಂದಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದುಕೊಂಡರೆ ಆಗಸ್ಟ್ 23 ರಂದು ಸಂಜೆ 5:47ಕ್ಕೆ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯಲಿದೆ.