ರಾಜ್ಯದಲ್ಲಿ ಹಾಡಹಗಲೇ ಮತ್ತೊಂದು ದರೋಡೆ

Share with

ರಾಜ್ಯದಲ್ಲಿ ದರೋಡೆ ಕೃತ್ಯಗಳು ಜನರನ್ನು ಬೆಚ್ಚಿಬೀಳಿಸುತ್ತಿವೆ. ಬೀದ‌ರ್, ಮಂಗಳೂರಿನ ನಂತರ ಈಗ ಮೈಸೂರು ಬಳಿ ರೋಡ್ ರಾಬರಿ ನಡೆದಿದೆ.

ಕಾರು ಅಡ್ಡಗಟ್ಟಿದ ಮುಸುಕುಧಾರಿಗಳು ಹಾಡಹಗಲೇ ದರೋಡೆ ನಡೆಸಿದ್ದಾರೆ. ಮೈಸೂರಿನ ಜಯಪುರ ಹೋಬಳಿ ಹಾರೋಹಳ್ಳಿ ಬಳಿ ಘಟನೆ ಸಂಭವಿಸಿದೆ. ಎರಡು ಕಾರುಗಳಲ್ಲಿ ಬಂದಿದ್ದ ಮುಸುಕುಧಾರಿಗಳು ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ. ಹಣದ ಜೊತೆಗೆ ಉದ್ಯಮಿಯ ಕಾರನ್ನು ಕೂಡ ಅಪಹರಿಸಿದ್ದಾರೆ. ಮೈಸೂರಿನ ಜಯಪುರ ಠಾಣೆ ಪೊಲೀಸರು ಈ ಸಂಬಂಧ ತನಿಖೆ ನಡೆಸುತ್ತಿದ್ದಾರೆ.


Share with