ಸದ್ಯ ಕೊಲೆ ಕೇಸ್‌ನಲ್ಲಿ ಕಾರಾಗೃಹದಲ್ಲಿರುವ ದರ್ಶನ್ & ಸಹಚರರ ಹೇಳಿಕೆಗಳ ಆಧಾರದ ಮೇಲೆ ಸಾಕ್ಷಿಗಳನ್ನು ಕಲೆ ಹಾಕುತ್ತಿರುವ ಪೊಲೀಸರು FIR ಸಲ್ಲಿಕೆ ಮಾಡಲು ನಿರ್ಧರಿಸಿದ್ದಾರೆ.
ಆಗಸ್ಟ್ 2ನೇ ವಾರದಲ್ಲಿ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ ಎನ್ನಲಾಗಿದೆ. ರೇಣುಕಾ ಮರಣೋತ್ತರ ಪರೀಕ್ಷೆ ವರದಿ, 180ಕ್ಕೂ ಹೆಚ್ಚು ಸಾಕ್ಷಿಗಳನ್ನು ಒಳಗೊಂಡ FIRನಲ್ಲಿ ದರ್ಶನ್ ಈ ಕೃತ್ಯದಲ್ಲಿ ಭಾಗಿ ಆಗಿದ್ದಾರೋ.. ಇಲ್ಲವೋ ಎಂಬುದರ ಉಲ್ಲೇಖ ಕೂಡ ಇರಲಿದೆ. ಇದರ ಮೇಲೆ ದರ್ಶನ್ ಭವಿಷ್ಯ ನಿರ್ಧಾರ ಆಗಲಿದೆ ಎನ್ನಲಾಗಿದೆ.