ಪದವಿ ಪೂರ್ಣಗೊಳಿಸಿ, ಕಂಪ್ಯೂಟರ್ ಜ್ಞಾನ ಹೊಂದಿರುವವರು ಅಭ್ಯರ್ಥಿಗಳು ಉದ್ಯೋಗದ ಹುಡುಕಾಟದಲ್ಲಿದ್ದೀರಾ, ಹಾಗಾದ್ರೆ ನೀವು ಈ ಅವಕಾಶವನ್ನು ಮಿಸ್ ಮಾಡಿಕೊಳ್ಳಲೇಬೇಡಿ. ಇದೀಗ ಸುಪ್ರೀಂಕೋರ್ಟ್ ನಲ್ಲಿ ಖಾಲಿ ಇರುವ 107 ಕೋರ್ಟ್ ಮಾಸ್ಟರ್, ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ ಹಾಗೂ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಇಂದೇ ಅರ್ಜಿ ಸಲ್ಲಿಸಿ.
ಹುದ್ದೆಗಳ ವಿವರ
* ಕೋರ್ಟ್ ಮಾಸ್ಟರ್ -31
* ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ -33
* ಪರ್ಸನಲ್ ಅಸಿಸ್ಟೆಂಟ್ – 43
* ಒಟ್ಟು ಹುದ್ದೆಗಳ ಸಂಖ್ಯೆ : 107 ಹುದ್ದೆಗಳು
* ಕರ್ತವ್ಯ ಸ್ಥಳ : ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ನಲ್ಲಿ ಕರ್ತವ್ಯ ನಿರ್ವಹಿಸಬೇಕು.
ಶೈಕ್ಷಣಿಕ ವಿದ್ಯಾರ್ಹತೆ ಹಾಗೂ ವಯೋಮಿತಿ
* ಕೋರ್ಟ್ ಮಾಸ್ಟರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಾನೂನು ಪದವಿ, ಇಂಗ್ಲಿಷ್ ಶಾರ್ಟ್ ಹ್ಯಾಂಡ್ ಟೈಪ್‌ರೈಟಿಂಗ್ ತರಬೇತಿ ಪಡೆದಿರಬೇಕು. ಕಡ್ಡಾಯವಾಗಿ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
* ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ ಹಾಗೂ ಪರ್ಸನಲ್ ಅಸಿಸ್ಟೆಂಟ್ ಹುದ್ದೆಗೆ ಯಾವುದೇ ಪದವಿ ಪಡೆದಿರಬೇಕು ಇಂಗ್ಲಿಷ್ ಶಾರ್ಟ್ ಹ್ಯಾಂಡ್ ಟೈಪ್ ರೈಟಿಂಗ್ ತರಬೇತಿಯೊಂದಿಗೆ ಕಂಪ್ಯೂಟರ್ ಜ್ಞಾನ ಹೊಂದಿರಬೇಕು.
* ಸೀನಿಯರ್ ಪರ್ಸನಲ್ ಅಸಿಸ್ಟೆಂಟ್ ಮತ್ತು ಪರ್ಸನಲ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷ ಹಾಗೂ ಗರಿಷ್ಠ 30 ವರ್ಷ ಮೀರಿರಬಾರದು. ಕೋರ್ಟ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ಕನಿಷ್ಠ ವಯಸ್ಸು 30 ವರ್ಷ ಹಾಗೂ ಗರಿಷ್ಠ 45 ವರ್ಷ ದಾಟಿರಬಹುದು.
ಅರ್ಜಿ ಶುಲ್ಕ:
* ಸಾಮಾನ್ಯ ವರ್ಗ, 2ಎ/2ಬಿ/3ಎ/3ಬಿವರ್ಗದ ಅಭ್ಯರ್ಥಿಗಳಿಗೆ: ರೂ 1000 /-
* ಪರಿಶಿಷ್ಟ ಜಾತಿ ಹಾಗೂ ಪಂಗಡ, ಅಂಗವಿಕಲ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ರೂ. 250/-
ಆಯ್ಕೆ ವಿಧಾನ:
* ಲಿಖಿತ ಪರೀಕ್ಷೆ
* ಟೈಪಿಂಗ್ ಸ್ಪೀಡ್ ಟೆಸ್ಟ್
* ಸಂದರ್ಶನ
ಪ್ರಮುಖ ದಿನಾಂಕಗಳು:
* ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ: 04-12-2024
* ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 25-12-2024