ರೀಲ್ಸ್ಗೆ ಅಡಿಕ್ಟ್ ಆಗಿದ್ದೀರಾ? ಅಧಿಕ ರಕ್ತದೊತ್ತಡಕ್ಕೆ ಕಾರಣವಾಗಬಹುದು

Share with

ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಅಥವಾ ಶಾರ್ಟ್ ವಿಡಿಯೋಗಳನ್ನು ನೋಡುವುದು ಯುವಕರು ಹಾಗೂ ಮಧ್ಯ ವಯಸ್ಕರ ಜೀವನದ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಊಟ, ನಿದ್ದೆ ಬಿಟ್ಟಾದರೂ ರೀಲ್ಸ್ಗಳನ್ನು ನೋಡಿಕೊಂಡು ಕಾಲ ಕಳೆಯುತ್ತಾರೆ. ಇತ್ತೀಚಿನ ಅಧ್ಯಯನವು ಹೇಳುವಂತೆ ಮಲಗುವ ಸಮಯದಲ್ಲಿ ರೀಲ್ಸ್ಗಳನ್ನು ವೀಕ್ಷಿಸುವುದು ಹೆಚ್ಚು ಸಮಯ ಮೊಬೈಲ್ ನೋಡುತ್ತಿರುವುದು ಯುವಕರು ಹಾಗೂ ಮಧ್ಯ ವಯಸ್ಕರಲ್ಲಿ ಅಧಿಕ ರಕ್ತದೊತ್ತಡವನ್ನು ಹೆಚ್ಚು ಮಾಡುವ ಸಾಧ್ಯತೆ ಇದೆ ಎಂದು ಹೇಳಿದೆ.

ಬಿಎಂಸಿ ಜರ್ನಲ್ನಲ್ಲಿ ಪ್ರಕಟವಾದ ಲೇಖನದಲ್ಲಿ, ಚೀನಾದಲ್ಲಿ 4,318 ಯುವ ಮತ್ತು ಮಧ್ಯ ವಯಸ್ಕರ ಮೇಲೆ ನಡೆಸಿದ ಅಧ್ಯಯನದಲ್ಲಿ ರೀಲ್ಸ್ಗಳನ್ನು ಹೆಚ್ಚಾಗಿ ವೀಕ್ಷಿಸುವವರು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿದೆ.

ಮಲಗುವ ಸಮಯದಲ್ಲಿ ರೀಲ್‌ಗಳನ್ನು ವೀಕ್ಷಿಸುವ ಸಮಯವನ್ನು ಆಧರಿಸಿ ಅಧ್ಯಯನವನ್ನು ನಡೆಸಲಾಯಿತು. ಮಲಗುವ ಸಮಯದಲ್ಲಿ ಮೊಬೈಲ್ ನೋಡುವುದು ಜಡ ಸ್ವಭಾವವನ್ನು ಪ್ರತಿಬಿಂಬಿಸುತ್ತದೆ. ಮಲಗುವ ಸಮಯದಲ್ಲಿ ವಿಡಿಯೋಗಳನ್ನು ವೀಕ್ಷಿಸುವುದರಿಂದ ನರಮಂಡಲಗಳು ಸಕ್ರಿಯವಾಗಿಯೇ ಇರುತ್ತವೆ, ಇದರಿಂದ ನಿದ್ರಾಹೀನತೆ ಉಂಟಾಗಬಹುದು ಹಾಗೆಯೇ ರಕ್ತದೊತ್ತಡಕ್ಕೂ ಕಾರಣವಾಗಬಹುದು ಎಂದು ಹೇಳಿದ್ದಾರೆ.


Share with

Leave a Reply

Your email address will not be published. Required fields are marked *